ಜಾನುವಾರು ಸಾಗಾಣಿಕೆ, ಹೊಂದಿರುವುದು ಗೋಹತ್ಯೆ ಕಾನೂನಿನಡಿ ಅಪರಾಧ ಅಲ್ಲ; ಅಲಹಾಬಾದ್ ಹೈಕೋರ್ಟ್

Update: 2023-06-08 03:06 GMT

ಪ್ರಯಾಗ್‌ರಾಜ್: ಕೇವಲ ಜಾನುವಾರುಗಳನ್ನು ಹೊಂದಿರುವುದು ಅಥವಾ ಅವುಗಳ ಸಾಗಾಣಿಕೆ, ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ- 1955ರ ಅಡಿಯಲ್ಲಿ ಅಪರಾಧ ಎನಿಸುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ವಿಕ್ರಮ್ ಡಿ ಚೌಹಾನ್ ಅವರು ಖುಷಿನಗರ ಜಿಲ್ಲೆಯ ಕುಂದನ್ ಯಾದವ್ ಎಂಬ ವ್ಯಕ್ತಿಗೆ ಜಾಮೀನು ಮಂಜೂರು ಮಾಡಿ, ಹಸುವಿಗೆ ಅಥವಾ ಕರುವಿಗೆ ಮಾರಣಾಂತಿಕವಾಗಿ ಗಾಯಗೊಳಿಸಿದ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.

ವಾಹನದಲ್ಲಿ ಸಾಗಿಸುತ್ತಿದ್ದ ಆರು ಹಸುಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವ್ಯಕ್ತಿ ಕಳೆದ ಮೂರು ತಿಂಗಳಿನಿಂದ ಜೈಲಿನಲ್ಲಿದ್ದು, ಈ ಹಸುಗಳಿಗೆ ಯಾವುದೇ ದೈಹಿಕ ಗಾಯಗಳು ಕಂಡುಬಂದಿರಲಿಲ್ಲ. ಆರೋಪಿಯ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಈ ಅಭಿಪ್ರಾಯಕ್ಕೆ ಬಂದಿದ್ದಾರೆ. ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆ ಮತ್ತು ಪ್ರಾಣಿಗಳಿಗೆ ಕ್ರೌರ್ಯ ಎಸಗುವುದನ್ನು ತಡೆಯುವ ಕಾಯ್ದೆ-1960ರ ಅಡಿಯಲ್ಲಿ ಆರೋಪ ಹೊರಿಸಲಾಗಿತ್ತು.

ಕುಂದನ್ ಯಾದವ್ ಜಾಮೀನು ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, "ಕೇವಲ ಜೀವಂತ ಹಸು/ಎತ್ತನ್ನು ಹೊಂದಿರುವುದು ಗೋಹತ್ಯೆ ಕಾಯ್ದೆಯಡಿಯಲ್ಲಿ ಅಪರಾಧ, ಅಪರಾಧ ಕುಮ್ಮಕ್ಕು ಅಥವಾ ಅಪರಾಧ ಪ್ರಯತ್ನ ಎನಿಸುವುದಿಲ್ಲ. ಇದರ ಜತೆಗೆ ಉತ್ತರ ಪ್ರದೇಶದಲ್ಲಿ ಒಂದೆಡೆಯಿಂದ ಇನ್ನೊಂದು ಕಡೆಗೆ ಜಾನುವಾರುಗಳನ್ನು ಸಾಗಾಟ ಮಾಡುವುದು ಕೂಡಾ ಅಪರಾಧವಲ್ಲ. ಆದ್ದರಿಂದ ಉತ್ತರ ಪ್ರದೇಶ ರಾಜ್ಯದೊಳಗೆ ಹಸುಗಳನ್ನು ಸಾಗಾಣಿಕೆ ಮಾಡುವುದು ಕಾಯ್ದೆಯಡಿ ಅಪರಾಧ ಎನಿಸುವುದಿಲ್ಲ" ಎಂದು ಸ್ಪಷ್ಟಪಡಿಸಿದೆ.

ಜಾನುವಾರು ಸಾಗಾಣಿಕೆ, ಹೊಂದಿರುವುದು ಗೋಹತ್ಯೆ ಕಾನೂನಿನಡಿ ಅಪರಾಧ ಅಲ್ಲ; ಹೈಕೋರ್ಟ್

Similar News