×
Ad

ಇಂಡೋನೇಶ್ಯ ಓಪನ್: ಸಾತ್ವಿಕ್‌-ಚಿರಾಗ್‌ಗೆ ಆಂಧ್ರ ಸಿಎಂ ಅಭಿನಂದನೆ

Update: 2023-06-19 23:24 IST

ಹೊಸದಿಲ್ಲಿ: ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಲ್ಲಿ ಡಬಲ್ಸ್ ವಿಭಾಗದಲ್ಲಿ ಅಮೋಘ ಜಯ ದಾಖಲಿಸಿ ಪ್ರಶಸ್ತಿ ಜಯಿಸಿರುವ ಸಾತ್ವಿಕ್‌ಸಾಯಿರಾಜ್ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗಮೋಹನ್ ರೆಡ್ಡಿ ಸೋಮವಾರ ಅಭಿನಂದನೆ ಸಲ್ಲಿಸಿದ್ದಾರೆ.

ಅತ್ಯುತ್ತಮ ಪ್ರದರ್ಶನ ನೀಡಿದ ಸಾತ್ವಿಕ್ ಹಾಗೂ ಚಿರಾಗ್ ಜಕಾರ್ತದಲ್ಲಿ ರವಿವಾರ ನಡೆದ ಪ್ರತಿಷ್ಠಿತ ಸೂಪರ್-1000 ಟೂರ್ನಮೆಂಟ್‌ನ ಫೈನಲ್‌ನಲ್ಲಿ ಮಲೇಶ್ಯದ ವಿಶ್ವ ಚಾಂಪಿಯನ್‌ಗಳಾದ ಆ್ಯರೊನ್ ಚಿಯಾ ಹಾಗೂ ಸೊಹ್ ಯಿಕ್‌ರನ್ನು ನೇರ ಗೇಮ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ ಸೂಪರ್-1000 ಪ್ರಶಸ್ತಿ ಜಯಿಸಿದ ಭಾರತದ ಮೊದಲ ಜೋಡಿ ಎನಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದ್ದರು.

ನಮ್ಮ ತೆಲುಗಿನ ಹುಡುಗ ಸಾತ್ವಿಕ್‌ಸಾಯಿರಾಜ್ ಹಾಗೂ ಚಿರಾಗ್‌ಗೆ ನಾನು ಅಭಿನಂದನೆ ಹಾಗೂ ಶುಭಾಶಯವನ್ನು ಕೋರುವೆ. ನೀವು ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದ್ದೀರಿ ಎಂದು ರೆಡ್ಡಿ ಟ್ವೀಟಿಸಿದ್ದಾರೆ. ರಂಕಿರೆಡ್ಡಿ ಆಂಧ್ರಪ್ರದೇಶದ ಗೋದಾವರಿ ವಲಯದ ಕೋನಸೀಮಾ ಜಿಲ್ಲೆಯ ಅಮಲಾಪುರ ಪಟ್ಟಣದವರು. 

Similar News