×
Ad

ಬೆಂಗಳೂರು | ಪಿಸ್ತೂಲ್ ಹಿಡಿದು ಪಬ್‍ಗೆ ನುಗ್ಗಿ ಹಣ ದೋಚಿದ ಅಪರಿಚಿತ ವ್ಯಕ್ತಿ

Update: 2025-05-12 18:28 IST

ಸಾಂದರ್ಭಿಕ ಚಿತ್ರ | PC: freepik.com

ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಪಿಸ್ತೂಲ್ ಹಿಡಿದು ಪಬ್‍ವೊಂದಕ್ಕೆ ನುಗ್ಗಿ ಅಂದಾಜು 50ರಿಂದ 60 ಸಾವಿರ ರೂ. ನಗದು ದೋಚಿರುವ ಘಟನೆ ಇಲ್ಲಿನ ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೇ 12ರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಸುಬ್ರಹ್ಮಣ್ಯ ನಗರ ಠಾಣಾ ವ್ಯಾಪ್ತಿಯ ಜಿಯೋಮೆಟ್ರಿ ಬ್ರೇವರೀ ಎಂಬ ಹೆಸರಿನ ಪಬ್‍ಗೆ ಪಿಸ್ತೂಲ್ ಹಿಡಿದು ನುಗ್ಗಿದ ವ್ಯಕ್ತಿಯು ಹಣ ದೋಚಿಕೊಂಡು ಬಳಿಕ ಪಬ್‍ನ ಬಾಗಿಲುಗಳನ್ನು ಮುಚ್ಚಿ ಪರಾರಿಯಾಗಿದ್ದಾನೆ ಎಂದು ಪಬ್‍ನ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಮಾಹಿತಿ ಆಧರಿಸಿ ತಕ್ಷಣ ಸ್ಥಳಕ್ಕೆ ಧಾವಿಸಿದ ಸುಬ್ರಹ್ಮಣ್ಯನಗರ ಠಾಣೆ ಪೊಲೀಸರು ಮತ್ತು ಕ್ವಿಕ್ ರೆಸ್ಪಾನ್ಸ್ ಟೀಂ(ಕ್ಯೂಆರ್‍ಟಿ) ಸಂಪೂರ್ಣ ಪಬ್ ತಪಾಸಣೆಗೊಳಪಡಿಸಿದಾಗ ಸ್ಥಳದಲ್ಲಿ ಯಾರೂ ಸಹ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹಲವು ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶ್ ಕುಮಾರ್ ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News