×
Ad

ಸಿಬಿಎಸ್‍ಇ ಫಲಿತಾಂಶ | ಬೆಂಗಳೂರು ವಲಯಕ್ಕೆ 10ನೇ ತರಗತಿಯಲ್ಲಿ ಮೂರನೆ, 12ನೇ ತರಗತಿಯಲ್ಲಿ ನಾಲ್ಕನೇ ಸ್ಥಾನ

Update: 2025-05-13 20:13 IST

ಸಾಂದರ್ಭಿಕ ಚಿತ್ರ | PTI

ಬೆಂಗಳೂರು : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್‍ನ(ಸಿಬಿಎಸ್‍ಇ) ಹತ್ತು ಹಾಗೂ ಹನ್ನೆರಡನೇ ತರಗತಿ ವಾರ್ಷಿಕ ಪರೀಕ್ಷೆಯ ಫಲಿತಾಂಶವು ಮಂಗಳವಾರ ಪ್ರಕಟವಾಗಿದೆ. ಬೆಂಗಳೂರು ವಲಯವು ಹತ್ತನೇ ತರಗತಿಯಲ್ಲಿ ಮೂರನೇ ಸ್ಥಾನವನ್ನು, ಹನ್ನೆರಡನೆ ತರಗತಿಯಲ್ಲಿ ನಾಲ್ಕನೇ ಸ್ಥಾನವನ್ನು ಪಡೆದಿದೆ.

ರಾಜ್ಯದಿಂದ ಹತ್ತನೇ ತರಗತಿಗೆ ಒಟ್ಟು 93,148 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, ಇದರಲ್ಲಿ 93,017 ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದಾರೆ. ಒಟ್ಟು 91,996 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.98.90 ಉತ್ತೀರ್ಣತೆ ದಾಖಲಾಗಿದೆ. ತೇರ್ಗಡೆಯಾದವರ ಪೈಕಿ 49,632 ಬಾಲಕರು ಮತ್ತು 42,634 ಬಾಲಕಿಯರು ಇದ್ದಾರೆ.

ರಾಜ್ಯದಿಂದ ಹನ್ನೆರಡನೇ ತರಗತಿ ಪರೀಕ್ಷೆಗೆ ಒಟ್ಟು 21,745 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು, 21,664 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷೆಯಲ್ಲಿ 20,786 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದು, ಶೇ.95.95 ಉತ್ತೀರ್ಣತೆ ದಾಖಲಾಗಿದೆ. ಇದರಲ್ಲಿ 11,143 ಬಾಲಕರು, 9,643 ಬಾಲಕಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News