×
Ad

ಯುದ್ಧ ಆಗಬಾರದೆಂದು ಬಯಸುತ್ತೇವೆ : ದಿನೇಶ್ ಗುಂಡೂರಾವ್

Update: 2025-05-09 23:49 IST

ಬೆಂಗಳೂರು: ಭಾರತ ಮತ್ತು ಪಾಕಿಸ್ತಾನ ನಡುವೆ ಉದ್ವಿಗ್ನ ಸ್ಥಿತಿ ಯುದ್ಧದವರೆಗೂ ಮುಟ್ಟಿಲ್ಲ. ನಾನು ಸಹ ಯುದ್ಧ ಆಗಬಾರದೆಂದು ಬಯಸುತ್ತೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಶುಕ್ರವಾರ ಇಲ್ಲಿನ ಕೆ.ಆರ್ ವೃತ್ತದಿಂದ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ‘ಜೈ ಹಿಂದ್ ತಿರಂಗಾ ಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಯುದ್ಧ ಯಾರಿಗೂ ಬೇಕಾಗಿಲ್ಲ. ಆದರೆ, ಈಗ ನಡೆಯುತ್ತಿರುವ ದಾಳಿ, ಪ್ರತಿದಾಳಿಯಲ್ಲಿ ಭಾರತಕ್ಕೆ ಜಯ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪೂರ್ಣ ಪ್ರಮಾಣದ ಯುದ್ಧ ಶುರುವಾಗಿಲ್ಲ, ಯುದ್ಧ ಬೇಡವೆಂದು ನಾವು ಬಯಸುತ್ತೇವೆ. ಆದರೆ, ಪಾಕಿಸ್ತಾನದ ಸೇನೆ ನಮ್ಮೊಂದಿಗೆ ಕಾಲುಕೆದರಿಕೊಂಡು ಜಗಳಕ್ಕೆ ಬರುವುದು, ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರನ್ನು ಬಿಟ್ಟು ಅಮಾಯಕರನ್ನು ಕೊಲ್ಲಿಸುವುದು ಮಾಡುತ್ತಿದೆ ಎಂದು ಅವರು ಉಲ್ಲೇಖಿಸಿದರು.

ಪಾಕಿಸ್ತಾನದ ಎಲ್ಲ ದುಷ್ಟ ಯೋಚನೆಗಳಿಗೆ ಸರಿಯಾದ ಉತ್ತರ ನೀಡುತ್ತಿರುವ ನಮ್ಮ ಸೇನೆಯನ್ನು ಅಭಿನಂದಿಸುವ ಕಾರ್ಯ ಇಂದು ಕಾಂಗ್ರೆಸ್ ಮಾಡಿದೆ. ಸೈನಿಕರೊಂದಿಗೆ ನಾವಿದ್ದೇವೆ ಎಂಬ ಅಂಶವನ್ನು ತೋರಿಸಲು ತಿರಂಗ ಯಾತ್ರೆ ಮಾಡುತ್ತಿದ್ದೇವೆ.

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News