×
Ad

ಅರಸೀಕೆರೆಯಲ್ಲೂ ಕಾಂಗ್ರೆಸ್ ಸಾಧನೆ ಸಮಾವೇಶ: ಕೆ.ಎಂ.ಶಿವಲಿಂಗೇಗೌಡ

Update: 2025-05-13 19:17 IST

 ಕೆ.ಎಂ.ಶಿವಲಿಂಗೇಗೌಡ

ಬೆಂಗಳೂರು : ಎರಡು ವರ್ಷಗಳಲ್ಲಿ ಕಾಂಗ್ರೆಸ್  ಸರಕಾರ ಮಾಡಿದ ಸಾಧನೆ ಮತ್ತು ಈ ಅವಧಿಯಲ್ಲಿ ಬಿಜೆಪಿ ನಾಯಕರು ಮಾಡಿದ ಅಪಪ್ರಚಾರವನ್ನು ರಾಜ್ಯದ ಜನತೆಗೆ ತಿಳಿಸಲು ಅರಸೀಕೆರೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30ರಂದು ಅರಸೀಕೆರೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಅಲ್ಲದೆ, ರೈತರಿಗೆ ಹೆಚ್ಚು ಹಣ ಸಿಗಲಿ ಎನ್ನುವ ಉದ್ದೇಶದಿಂದ ಹಾಲಿನ ದರ ಹೆಚ್ಚಳ ಮಾಡಲಾಯಿತು. ಆದರೆ, ಸರಕಾರ ತಾನೇ ನುಂಗಲು ಬೆಲೆ ಏರಿಸಿದೆ ಎಂದು ಬಿಜೆಪಿಗರು ಅಪಪ್ರಚಾರ ಮಾಡಿದರು. ಅವರ ಎಲ್ಲ ಸುಳ್ಳು ಆರೋಪಗಳಿಗೆ ಉತ್ತರ ನೀಡಬೇಕಿದೆ. ಈ ನಿಟ್ಟಿನಲ್ಲಿ ಸಮಾವೇಶ ನಡೆಸುತ್ತೇವೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News