×
Ad

ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಆಹಾರ ಧಾನ್ಯಗಳ ಮುಂಗಡ ವಿತರಣೆಗೆ ನಿರ್ಧಾರ

Update: 2025-05-11 23:48 IST

ಸಾಂದರ್ಭಿಕ ಚಿತ್ರ

ಬೆಂಗಳೂರು : ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಡಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಮೂರು ತಿಂಗಳ ಅವಧಿಗೆ ಮುಂಗಡವಾಗಿ ಆಹಾರ ಧಾನ್ಯಗಳನ್ನು ನೀಡಲು ನಿರ್ಧರಿಸಿದೆ.

ಭಾರೀ ಮಳೆಯ ಸಮಯದಲ್ಲಿ ದೂರದ ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಸಂಪರ್ಕ ಕಡಿತಗೊಳ್ಳುತ್ತದೆ. ಇದರಿಂದ ಉಂಟಾಗಬಹುದಾದ ಅಡೆತಡೆಗಳನ್ನು ತಡೆಗಟ್ಟುವುದು ಇದರ ಪ್ರಾಥಮಿಕ ಉದ್ದೇಶವಾಗಿದೆ.

ಜೂನ್, ಜುಲೈ, ಆಗಸ್ಟ್ ಅವಧಿಗೆ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ ಅಡಿ ಹಂಚಿಕೆಗೆ ಸಂಬಂಧಪಟ್ಟಂತೆ ಎಫ್‍ಸಿಐ ಅಹಾರ ಪದಾರ್ಥಗಳ ಬೇಡಿಕೆ ವಿವರ ಪಟ್ಟಿ ಸಿದ್ದಪಡಿಸಿದೆ. ಅದರಂತೆ 4,51,893 ಮೆಟ್ರಿಕ್ ಟನ್ ಅಕ್ಕಿ, 1,17,870 ಮೆ. ಟನ್ ರಾಗಿ ಹಾಗೂ 82,446 ಮೆ. ಟನ್ ಜೋಳ ಸೇರಿ ಒಟ್ಟು 6,52,209 ಮೆ. ಟನ್ ಆಹಾರ ಪದಾರ್ಥಗಳನ್ನು ನೀಡಲಿದೆ.

ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ನಿಬಂಧನೆಗಳಿಗೆ ಅನುಸಾರವಾಗಿ ಈ ಹಿಂದೆಯೂ ಇಂತಹ ಮುಂಗಡ ವಿತರಣಾ ಕ್ರಮಗಳನ್ನು ಕೇಂದ್ರ ಸರಕಾರ ಕೈಗೊಂಡಿತ್ತು ಎಂದು ಭಾರತೀಯ ಆಹಾರ ನಿಗಮ(ಎಫ್‍ಸಿಐ) ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News