×
Ad

ಶಾಸಕ ವಿನಯ್ ಕುಲಕರ್ಣಿಗೆ ಈ.ಡಿ.ಸಮನ್ಸ್ ವಿಚಾರ | ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಮಧ್ಯಂತರ ಆದೇಶ

Update: 2025-05-15 23:45 IST

ಬೆಂಗಳೂರು : ಐಶ್ವರ್ಯ ಗೌಡ ಚಿನ್ನದ ವಂಚನೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿಗೆ ಈ.ಡಿ. ಸಮನ್ಸ್ ನೀಡಿದ್ದ ಕೇಸ್‌ನಲ್ಲಿ ಬಲವಂತದ ಕ್ರಮ ತೆಗೆದುಕೊಳ್ಳದಂತೆ ಹೈಕೋರ್ಟ್ ಆದೇಶಿಸಿದೆ.

ಈ.ಡಿ. ಕೇಸ್, ಸಮನ್ಸ್ ಪ್ರಶ್ನಿಸಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ. ಶಿವಶಂಕರ್ ಅಮರಣ್ಣವರ್ ಅವರಿದ್ದ ಹೈಕೋರ್ಟ್ ಪೀಠ ಮೇಲಿನ ಆದೇಶ ನೀಡಿದೆ.

ವಿಚಾರಣೆ ವೇಳೆ ಹೈಕೋರ್ಟ್ ಮಧ್ಯಂತರ ಆದೇಶಕ್ಕೆ ಈ.ಡಿ. ಪರ ಎಎಸ್‌ಜಿ ಅರವಿಂದ್ ಕಾಮತ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ತಮ್ಮ ವಾದಕ್ಕೆ ಅವಕಾಶ ನೀಡದೇ ಮಧ್ಯಂತರ ಆದೇಶ ನೀಡಬಾರದು. ಈ.ಡಿ. ಸಲ್ಲಿಸಿದ ಲಿಖಿತ ಆಕ್ಷೇಪ ಪರಿಗಣಿಸಬೇಕೆಂದು ಮನವಿ ಮಾಡಿದರು. ಅದರೆ ನ್ಯಾಯಪೀಠ ಮಧ್ಯಂತರ ಆದೇಶಕ್ಕೆ ಈ.ಡಿ. ಆಕ್ಷೇಪ ಪರಿಗಣಿಸಲು ನಿರಾಕರಿಸಿ ಮಧ್ಯಂತರ ಆದೇಶ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News