×
Ad

ಮಸ್ಜಿದೆ ಉಮ್ಮುಲ್ ಹಸ್ನೈನ್ ಅಧ್ಯಕ್ಷ ಝಿಯಾಉಲ್ಲಾ ಖಾನ್ ನಿಧನ

Update: 2023-12-23 20:27 IST

ಬೆಂಗಳೂರು: ಬೆಂಗಳೂರು ಪೂರ್ವ ತಾಲೂಕಿನ ಮಸೀದಿ, ಮದ್ರಸಾ ಹಾಗೂ ಇತರ ವಕ್ಫ್ ಸಂಸ್ಥೆಗಳ ಒಕ್ಕೂಟ ಹಾಗೂ ಇಂದಿರಾ ನಗರದ ಮಸ್ಜಿದೆ ಉಮ್ಮುಲ್ ಹಸ್ನೈನ್ ಅಧ್ಯಕ್ಷ ಝಿಯಾಉಲ್ಲಾ ಖಾನ್(82) ವಯೋ ಸಹಜ ಅನಾರೋಗ್ಯದಿಂದಾಗಿ ಶನಿವಾರ ಮುಂಜಾನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ನಿವೃತ್ತ ಐಎಎಸ್ ಅಧಿಕಾರಿ ಮುಹಮ್ಮದ್ ಸನಾವುಲ್ಲಾ, ನಾಸಿಹ್ ಪಬ್ಲಿಕ್ ಶಾಲೆಯ ಮುಖ್ಯಸ್ಥ ಮೌಲಾನ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಸುದ್ದಿನ್ ಬಜ್ಲಿ ಸೇರಿದಂತೆ ಸಾವಿರಾರು ಮಂದಿ ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

 ಜನಾಝ ನಮಾಝನ್ನು ಮಸ್ಜಿದೆ ಉಮ್ಮುಲ್ ಹಸ್ನೈನ್ ಆವರಣದಲ್ಲಿ ನೆರವೇರಿಸಲಾಯಿತು. ಬಳಿಕ ಹಲಸೂರಿನ ಖಬರಸ್ಥಾನ್‍ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಅಭಿವೃದ್ಧಿಯ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದ ಝಿಯಾಉಲ್ಲಾ ಖಾನ್, ಸಲ್ ಸಬೀಲ್ ಎಜುಕೇಷನಲ್ ಟ್ರಸ್ಟ್ ವತಿಯಿಂದ ಇಂದಿರಾನಗರದಲ್ಲಿ ಸ್ಥಾಪಿಸಿರುವ ಸಿಲಿಕಾನ್ ಸಿಟಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News