×
Ad

ಕಂಪ್ಲಿ | ಕ್ರಿಸ್ಟಿಯನ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್‌ಗೆ ನೂತನ ಪದಾಧಿಕಾರಿಗಳ ಆಯ್ಕೆ

Update: 2026-02-27 23:27 IST

ಕಂಪ್ಲಿ : ಪಟ್ಟಣದ ಹೊಸ ಜೀವನ ಕ್ರೈಸ್ಟ್ ಚರ್ಚ್ ನಲ್ಲಿ ತಾಲೂಕು ಕ್ರಿಸ್ಟಿಯನ್ಸ್ ಪಾಸ್ಟರ್ಸ್ ವೆಲ್ಫೇರ್ ಅಸೋಸಿಯೇಶನ್ ಸಂಘಕ್ಕೆ ಚುನಾವಣೆ ನಡೆಯಿತು.

ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಎಲ್. ಷಡ್ಡಾಯ ಚರ್ಚ್ ಪಾಸ್ಟರ್ ಪಾಲ್ ಪಂಪಾಪತಿ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಪಾಸ್ಟರ್ ಇಸ್ರಾಯಲ್, ಕಾರ್ಯದರ್ಶಿಯಾಗಿ ಡ್ಯಾನಿಯಲ್, ಖಜಾಂಚಿಯಾಗಿ ರಾಜು ಮೈತ್ರಿ, ಸಹ ಖಜಾಂಚಿಯಾಗಿ ರವಿಕುಮಾರ್ ಆಯ್ಕೆಯಾದರು.

ಸಲಹಾ ಸಮಿತಿ ಸದಸ್ಯರಾಗಿ ಪಾಸ್ಟರ್ ಪ್ರಸಾದ್‌ರಾವ್, ಮತ್ತಾಯ, ಸಾಂಬಯ್ ರೆಡ್ಡಿ ಹಾಗೂ ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಬಿ. ರಾಜು, ತಿಮೋತಿ ಯನ್ನಪ್ಪ, ಶ್ಯಾಲೋಂ, ಶ್ರೀನಿವಾಸ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಪಾಸ್ಟರ್ ಬಿ. ರಾಜು ಕಾರ್ಯನಿರ್ವಹಿಸಿದರು.

ನಂತರ ನೂತನ ಪದಾಧಿಕಾರಿಗಳಿಗೆ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News