×
Ad

ಬಳ್ಳಾರಿ | ಸಂತೋಷ್ ಲಾಡ್ ಅವರ 52ನೇ ಹುಟ್ಟುಹಬ್ಬ: ಸಾಧಕರಿಗೆ ಸನ್ಮಾನ

Update: 2026-02-27 23:02 IST

ಬಳ್ಳಾರಿ : ನಗರದ ಮೋತಿ ಸರ್ಕಲ್‌ನ ಖಾದಿ ಬಂಡಾರದ ರಾಕ್ ವಿಲ್ಲೆ ಕರೋಕೆ ಕ್ಲಬ್ಬಿನಲ್ಲಿ ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರ 52ನೇ ಹುಟ್ಟುಹಬ್ಬದ ಪ್ರಯುಕ್ತ ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಎಮ್ಮಿಗನೂರು ಗ್ರಾಮದ ಸರ್ಕಾರಿ ಶತಮಾನ ಶಾಲೆಯ ಗೌರವ ಶಿಕ್ಷಕ ಹಾಗೂ ನಿರೂಪಕ ಎಸ್. ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆಯನ್ನು ಪರಿಗಣಿಸಿ ಗೌರವಿಸಿ ಅಭಿನಂದಿಸಲಾಯಿತು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿಷ್ಟಿ ರುದ್ರಪ್ಪ, ತೋರಣಗಲ್ಲಿನ ಬಂಡಾಯ ಸಾಹಿತಿ ಅಬ್ದುಲ್ ಹೈ, ಸಂಜೀವಿನಿ ಜೀವ ರಕ್ಷಕ ಟ್ರಸ್ಟ್ ರಾಜ್ಯ ಯುವ ಘಟಕದ ಅಧ್ಯಕ್ಷ ಪ್ರಸನ್ನ ಕುಮಾರ್, ಪದಾಧಿಕಾರಿಗಳಾದ ಡಿಜೆ ತಿರುಮಲ, ಲೋಕೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News