×
Ad

ಬೇಲೂರು | ವ್ಯಾಪಾರ ಶೆಡ್ ಗಳ ಛಾವಣಿ ಕುಸಿತ: ಇಬ್ಬರು ಮೃತ್ಯು; ಇನ್ನಿಬ್ಬರ ಸ್ಥಿತಿ ಚಿಂತಾಜನಕ

Belur | Roof collapse of business sheds: Two dead; condition of two others critical

Update: 2025-03-09 14:49 IST

ಬೇಲೂರು, ಫೆ.9: ಬೇಲೂರು ಬಸ್ ನಿಲ್ದಾಣದ ಎದುರಿರುವ ವ್ಯಾಪಾರ ಶೆಡ್ ಗಳ ಮುಂಭಾಗದ ಛಾವಣಿ ಏಕಾಏಕಿ ಕುಸಿದುಬಿದ್ದ ಪರಿಣಾಮ ಇಬ್ಬರು ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.

 ಇಲ್ಲಿನ ಬಸ್ ನಿಲ್ದಾಣದ ಮುಂಭಾಗದಲ್ಲಿ ವ್ಯಾಪಾರಕ್ಕಾಗಿ ನಿರ್ಮಿಸಲಾಗಿರುವ ತಾತ್ಕಾಲಿಕ ಶೆಡ್ ಗಳ ಮುಂಭಾಗದ ಛಾವಣಿ ಏಕಾಏಕಿ ಕುಸಿದ ಪರಿಣಾಮ ಈ ಅವಘಡ ಸಂಭವಿಸಿದೆ. ಘಟನೆ ವೇಳೆ ವ್ಯಾಪಾರ ಶೆಡ್ ಗಳಲ್ಲಿದ್ದ ನಾಲ್ವರು ಸಿಮೆಂಟ್ ಬೀಮ್ ಗಳ ಅಡಿಯಲ್ಲಿ ಸಿಲುಕಿದ್ದರು. ಈ ಪೈಕಿ ಓರ್ವ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಮೂವರನ್ನು ಹಾಸನದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುಗಳ ಪೈಕಿ ಓರ್ವ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಮಮತಾ, ವೃತ್ತ ನಿರೀಕ್ಷಕ ರೇವಣ್ಣ, ಪಿಎಸ್ಸೈ ಪ್ರವೀಣ್ ಹಾಗೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News