×
Ad

ಬೇಲೂರು: ವಿದ್ಯುತ್ ಸ್ಪರ್ಶಿಸಿ ಎರಡು ಕುರಿಗಳು ಸ್ಥಳದಲ್ಲೇ ಸಾವು

Update: 2024-10-18 09:40 IST

ಬೇಲೂರು: ವಿದ್ಯುತ್ ಸ್ಪರ್ಶಿಸಿ ಎರಡು ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಜೆಪಿನಗರದ ಪೈವ್ ಸ್ಟಾರ್ ಬಾರ್ ಪಕ್ಕದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಬಳಿ  ನಡೆದಿದೆ.

ಜೆ.ಪಿ ನಗರ ನಿವಾಸಿ  ಇಮ್ತಿಯಾಝ್ ಅವರು ಒಟ್ಟು 8 ಕುರಿಗಳ ನ್ನು ಮೇಯಿಸಿಕೊಂಡು ಬರುವಾಗ  ಮೂರು ಕುರಿಗಳು ಎಡಬದಿಯಲ್ಲಿ ಸಾಗಿದ್ದು ಆ ವೇಳೆ ಟ್ರಾನ್ಸ್ ಫಾರ್ಮ ಇರುವ ಜಾಗದ ಸುತ್ತಮುತ್ತ ಗ್ರೌಂಡಿಗ್ ಆಗಿದೆ. ಈ ವೇಳೆ ಎರಡು ಕುರಿಗಳು  ಸ್ಥಳದಲ್ಲೇ ಸತ್ತಿದ್ದು ಇನ್ನೊಂದು ಕುರಿ ಗಂಭೀರವಾಗಿ ಗಾಯಗೊಂಡಿದೆ.

ತಕ್ಷಣವೇ ಕೆಇಬಿ ಗೆ ಕರೆ ಮಾಡಿ ಗ್ರೌಂಡಿಂಗ್ ನಿಂದ ಕುರಿಗಳು ಸಾವನ್ನಪ್ಪಿರುವ ವಿಷಯ ತಿಳಿಸಿದಾಗ,  ಕೆ ಇ ಬಿ ಯವರು ಉಡಾಫೆಯಿಂದ ಉತ್ತರಿಸಿದ್ದಾರೆ ಎಂದು ಕುರಿ ಮಾಲೀಕ ಇಮ್ತಿಯಾಝ್ ಅವರು ಆರೋಪಿಸಿದ್ದಾರೆ.

ಸುಮಾರು 30 ಸಾವಿರ ಬೆಲೆ ಬಾಳುವ ಕುರಿಗಳು ಸತ್ತಿದ್ದು ನಾವು ಸಾಲ ಮಾಡಿ ತಂದಿದ್ದೇವೆ. ನಾವು ಅವುಗಳನ್ನು ಮೇಯಿಸಿಕೊಂಡು ಕುವೆಂಪು ನಗರದ ಶೆಡ್ ಗೆ ಹೋಗುವಾಗ ಈ ಘಟನೆ ನಡೆದಿದೆ.  ಇಲ್ಲಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ಶಾಲೆಗೆ ತೆರಳುತ್ತಾರೆ. ಅವರ ಜೀವಕ್ಕೆ ಏನಾದರೂ ತೊಂದರೆ ಆದರೆ ಹೊಣೆ ಯಾರು ಎಂದು ಪ್ರಶ್ನಿಸಿದ್ದಾರೆ.

ಇಲ್ಲಿರುವ ಟ್ರಾನ್ಸ್ ಫಾರ್ಮರ್ ಮೊದಲು ಸರಿಪಡಿಸಿ ಇಲ್ಲದಿದ್ದರೆ ಸಾರ್ವಜನಿಕ ರೊಂದಿಗೆ ಕೆಇಬಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಇಮ್ತಿಯಾಝ್ ಎಚ್ಚರಿಕೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News