×
Ad

ಪರಪ್ಪನ ಅಗ್ರಹಾರ ಜೈಲೊಳಗೆ ಅಕ್ರಮ ಸ್ಮಾರ್ಟ್‌ಫೋನ್, ಈಯರ್‌ಫೋನ್ ಸಾಗಾಟ ಪ್ರಕರಣ: ಸಿಬ್ಬಂದಿ ಬಂಧನ

Update: 2025-10-25 23:49 IST

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದೊಳಗೆ ಅನಧಿಕೃತ ವಸ್ತುಗಳನ್ನು ಕೊಂಡೊಯ್ಯಲು ಯತ್ನಿಸಿದ ಸಿಬ್ಬಂದಿಯನ್ನು ತಪಾಸಣೆಯ ವೇಳೆ ಜೈಲು ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸಿರುವುದಾಗಿ ವರದಿಯಾಗಿದೆ.

ಅಮರ್ ಪ್ರಾಂಜೆ (29) ಬಂಧಿತ ಸಿಬ್ಬಂದಿ ಎಂದು ಗುರುತಿಸಲಾಗಿದೆ.

ಶಂಕಾಸ್ಪದ ವರ್ತನೆ ಕಂಡುಬಂದ ಹಿನ್ನೆಲೆಯಲ್ಲಿ ನಡೆಸಿದ ತಪಾಸಣೆಯ ವೇಳೆ ಅವರ ಬಳಿ ಒಂದು ಸ್ಮಾರ್ಟ್ ಫೋನ್ ಹಾಗೂ ಎರಡು ಇಯರ್‌ಫೋನ್‌ಗಳು ಪತ್ತೆಯಾಗಿವೆ. ಈ ವಸ್ತುಗಳನ್ನು ಅವರು ಖಾಸಗಿ ಸ್ಥಳದಲ್ಲಿ ಅಡಗಿಸಿಕೊಂಡು ಜೈಲು ಒಳಗೆ ಕೊಂಡೊಯ್ಯಲು ಮುಂದಾಗಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಜೈಲು ನಿಯಮ ಉಲ್ಲಂಘನೆ ಹಾಗೂ ಸುರಕ್ಷತಾ ನಿಯಮಗಳನ್ನು ಮೀರಿ ಅನಧಿಕೃತ ವಸ್ತುಗಳನ್ನು ಒಳಗೆ ಕೊಂಡೊಯ್ಯಲು ಯತ್ನಿಸಿರುವ ಹಿನ್ನೆಲೆಯಲ್ಲಿ ಜೈಲು ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ಅಮರ್ ಪ್ರಾಂಜೆಯನ್ನು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News