×
Ad

ಪ್ರವಾಸೋದ್ಯಮದಿಂದ ಹೆಚ್ಚಿನ ವಿಷಯಗಳು ತಿಳಿದುಕೊಳ್ಳಬಹುದು : ಆಯುಕ್ತೆ ರಮ್ಯಾ ರಂಗನಾಥ

Update: 2025-09-27 18:11 IST

ಬೀದರ್ : ಪ್ರವಾಸೋದ್ಯಮದಿಂದ ಹೆಚ್ಚಿನ ವಿಷಯಗಳು ತಿಳಿದುಕೊಳ್ಳಬಹುದು ಎಂದು ಮಹಾನಗರ ಪಾಲಿಕೆಯ ಆಯುಕ್ತೆ ರಮ್ಯಾ ರಂಗನಾಥ್ ಅವರು ತಿಳಿಸಿದರು.

ಶನಿವಾರ ನಗರದ ಚನ್ನಬಸವ ಪಟ್ಟದೇವರು ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರವಾಸೋದ್ಯಮದಿಂದ ಐತಿಹಾಸಿಕ, ಸಾಂಸ್ಕೃತಿಕ, ಪ್ರಾಕೃತಿಕ ಮಹತ್ವವುಳ್ಳ ನೆಲೆಗಳ ಬಗ್ಗೆ ತಿಳಿದುಕೊಳ್ಳಬಹುದು. 'ದೇಶ ಸುತ್ತು, ಕೋಶ ಓದು' ಎಂಬ ಮಾತಿನಂತೆ ನಾವು ಕೆಲವು ಸ್ಥಳಗಳಿಗೆ ಭೇಟಿ ನೀಡಿದಾಗ ಅಲ್ಲಿನ ಇತಿಹಾಸ, ಸಂಸ್ಕೃತಿ, ಆಚಾರ ವಿಚಾರ, ಕಲೆ ಸಾಹಿತ್ಯ ಮುಂತಾದವು ತಿಳಿದುಕೊಳ್ಳಬಹುದು ಎಂದರು.

ವಿನಯ್ ಮಾಳಗೆ ಅವರು 'ಪ್ರವಾಸೋದ್ಯಮ ಮತ್ತು ಸುಸ್ಥಿರ ಪರಿವರ್ತನೆ' ಕುರಿತು ಉಪನ್ಯಾಸ ನೀಡಿ, ಬೀದರ್ ಜಿಲ್ಲೆ ತನ್ನದೆಯಾದ ಇತಿಹಾಸ ಹೊಂದಿರುವ ಜಿಲ್ಲೆಯಾಗಿದೆ. ಇಲ್ಲಿ ಹಲವಾರು ಕೋಟೆ, ಅನೇಕ ಸುರಂಗ ಬಾವಿ ಹಾಗೂ ಕಾಲುವೆಗಳು ಒಳಗೊಂಡಿದೆ. ಬೀದರ್ ಕೋಟೆಯು ಭಾರತದಲ್ಲಿ ಅತ್ಯಂತ ಎರಡನೆ ದೊಡ್ಡ ಕೋಟೆಯಾಗಿದ್ದು, ಇದರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಅಭಿವೃದ್ಧಿ ಯೋಜನೆಗಳನ್ನು ಮಂಜೂರಾಗಿರುತ್ತವೆ. ಬೀದರ್ ಜಿಲ್ಲೆಯು ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಹೆಚ್ಚು ಅಭಿವೃದ್ಧಿ ಪಡಿಸಲು ಸರ್ಕಾರವು ಸಹ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಬೆಳಿಗ್ಗೆ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಬೀದರ್ ಕೋಟೆಯಿಂದ ಬೆಳಿಗ್ಗೆ 6:30 ಮೆರವಣಿಗೆ ನಡಿಗೆ ಪ್ರಾರಂಭಿಸಿ, ಮುಹಮ್ಮದ್‌ ಗವಾನ ಮದರಸಾ, ಚೌಬಾರ, ನಯಾಕಮಾನ್, ಶಿವಾಜಿ ಬಸವೇಶ್ವರ್ ವೃತ್ತ, ಶಿವಾಜಿ ವೃತ್ತದಿಂದ ಪೂಜ್ಯ ಚನ್ನಬಸವ ಪಟ್ಟದೇವರು ರಂಗಮದಿರಕ್ಕೆ ತಲುಪಿತು.

ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಡೆಂಗಿ ಶಿವಲಿಂಗಪ್ಪ, ಪ್ರವಾಸಿ ಮಾರ್ಗದರ್ಶಿಗಳು, ಶಾಹೀನ್ ಮತ್ತು ಕರ್ನಾಟಕ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News