ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್‌ಜಾನ್-2025 ಸಮಾಪ್ತಿ; ದ.ಕ ಸೌತ್ ಜಿಲ್ಲೆ ಚಾಂಪಿಯನ್ಸ್
ಚಿಕ್ಕಮಗಳೂರು : ಮುಸ್ಲಿಂ ಸಮಾಜದ ಏಳಿಗೆಯಲ್ಲಿ ಮುಅಲ್ಲಿಮರ ಸೇವೆ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ ಎಂದು ಎಸ್.ಎಂ.ಎ ರಾಜ್ಯಾಧ್ಯಕ್ಷರಾದ ಇಸ್ಮಾಯಿಲ್ ಮದನಿ ಉಜಿರೆ ತಂಙಳ್ ಅವರು ತಿಳಿಸಿದರು.
ಮದ್ರಸಾ ಅಧ್ಯಾಪಕರ ಒಕ್ಕೂಟ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್.ಜೆ.ಎಂ) ವತಿಯಿಂದ ಚಿಕ್ಕಮಗಳೂರಿನ ಉಪ್ಪಳ್ಳಿಯ ಶಾದುಲಿ ಜುಮಾ ಮಸ್ಜಿದ್ ವಠಾರದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ಮುಅಲ್ಲಿಂ ಮೆಹರ್‌ಜಾನ್ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಎಸ್.ಜೆ.ಎಂ ರಾಜ್ಯಾಧ್ಯಕ್ಷ ಅಬ್ದುಲ್ ರಹಿಮಾನ್ ಮದನಿ ಜೆಪ್ಪು ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಕ್ರಿಯವಾಗಿ ಬೋಧನಾ ರಂಗಕ್ಕಿಳಿದಿರುವ ಮದ್ರಸಾ ಅಧ್ಯಾಪಕರಲ್ಲಿ ನಾಯಕತ್ವ ಗುಣವನ್ನು ಇನ್ನಷ್ಟು ಪೋಷಿಸಲು ಮುಅಲ್ಲಿಂ ಮೆಹರ್‌ಜಾನ್ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು.
ಮೂರು ಪ್ರಮುಖ ವೇದಿಕೆಗಳಲ್ಲಿ ಸುಮಾರು 40ರಷ್ಟು ವೈವಿಧ್ಯಮಯ ಸ್ಪರ್ಧೆಗಳೊಂದಿಗೆ 300ರಷ್ಟು ಮುಅಲ್ಲಿಮರು ಸ್ಪರ್ಧೆಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು.
ರಾಜ್ಯ ಪ್ರೋಗ್ರಾಮ್ ಸಮಿತಿ ಚೇರ್ಮನ್ ಹಾಫಿಳ್ ಮುಹಮ್ಮದ್ ಹನೀಫ್ ಮಿಸ್ಬಾಹಿ ಪ್ರಾಸ್ತಾವಿಕ ಭಾಷಣ ಮಾಡಿದರು. ಯೂಸುಫ್ ಮದನಿ ಬೇಲೂರು, ಕೆ.ಎಂ.ಜೆ ಜಿಲ್ಲಾಧ್ಯಕ್ಷ ಅಹ್ಮದ್ ಝಮೀರ್ ಬಾಳೆಹೊನ್ನೂರು, ಎಸ್.ಎಂ.ಎ ಜಿಲ್ಲಾಧ್ಯಕ್ಷ ಅಬೂಬಕರ್ ಸಿದ್ದೀಖ್ ಸಂಗೀನ್ ಹಾಗೂ ಯೂಸುಫ್ ಹಾಜಿ ಉಪ್ಪಳ್ಳಿ ಶುಭ ಹಾರೈಸಿ ಮಾತನಾಡಿದರು.
ಸ್ಥಳೀಯ ಮುದರ್ರಿಸ್ ಇಸ್ಮಾಯಿಲ್ ಸಅದಿ ಮಾಚಾರ್ ಅವರ ನೇತ್ರತ್ವದಲ್ಲಿ ಮಖಾಂ ಝಿಯಾರತ್ ನಡೆದು, ಬಳಿಕ ಶಾದುಲಿ ಜುಮಾ ಮಸ್ಜಿದ್ ಅಧ್ಯಕ್ಷ ಉಸ್ಮಾನ್ ಹಂಡುಗುಳಿ ಅವರು ದ್ವಜಾರೋಣ ನೆರವೇರಿಸಿದರು.
ರಾಜ್ಯ ಎಸ್.ಜೆ.ಎಂ ಕೋಶಾಧಿಕಾರಿ ಅಬ್ದುಲ್ ರಶೀದ್ ಸಖಾಫಿ ಮಜೂರು, ಎಸ್.ಎಂ.ಎ ರಾಜ್ಯ ಉಪಾಧ್ಯಕ್ಷ ಬಿ.ಎಸ್. ಮುಹಮ್ಮದ್, ಎಸ್.ವೈ.ಎಸ್ ಕಲ್ಚರಲ್ ಕಾರ್ಯದರ್ಶಿ ಸೈಯದ್, ಎಸ್.ಎಸ್.ಎಫ್ ರಾಷ್ಟ್ರೀಯ ಕಾರ್ಯದರ್ಶಿ ಸಫ್ವಾನ್ ಚಿಕ್ಕಮಗಳೂರು, ರಾಜ್ಯ ಮೆಹರ್‌ಜಾನ್ ಕನ್ವೀನರ್ ಇಸ್ಮಾಯಿಲ್ ಸಅದಿ ಉರುಮಣೆ, ಯಾಕೂಬ್ ಲತೀಫಿ, ಅಬ್ದುಲ್ಲಾ ಸಖಾಫಿ, ಕೆಕೆಎಂ ಕಾಮಿಲ್ ಸಖಾಫಿ, ಪುಂಡೂರು ಇಬ್ರಾಹಿಂ ಸಖಾಫಿ, ಮುಫತ್ತಿಶರುಗಳಾದ ಹಸನ್ ಸಖಾಫಿ, ಖಲಂದರ್ ಸಖಾಫಿ, ಮುಸ್ತಫ ಹಿಮಮಿ, ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ, ಮುಹಿಯದ್ದೀನ್ ಸಅದಿ ತೋಟಾಲ್, ತಾಜುದ್ದೀನ್ ಫಾಳಿಲಿ ಬೆಂಗಳೂರು, ಶರೀಫ್ ಸಖಾಫಿ ನೆಕ್ಕಿಲ್, ಹನೀಫ್ ಸಖಾಫಿ ಹಾಸನ, ಅಬ್ದುಲ್ ಅಝೀಝ್ ನೂರಾನಿ, ಅಬ್ದುಲ್ ಹಮೀದ್ ಸಅದಿ, ಸೈಫುಲ್ಲಾ ಸಖಾಫಿ ಶಿವಮೊಗ್ಗ ಸಹಿತ ರಾಜ್ಯ ನಾಯಕರು, ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರೋಪ ಸಮಾರಂಭದಲ್ಲಿ ಸ್ವಾಗತ ಸಮಿತಿ ಕೋಶಾಧಿಕಾರಿ ನಾಸಿರ್ ಇಂಫಾಲ್ ಶುಭ ಹಾರೈಸಿದರು. ಅಸ್ಸಯ್ಯಿದ್ ಸ್ವಾಲಿಹ್ ತಂಙಳ್ ಉಪ್ಪಳ್ಳಿ ಟ್ರೋಫಿ ವಿತರಣೆ ನಡೆಸಿದರು.
ಹೈಝೋನ್ ವಿಭಾಗದಲ್ಲಿ ದ.ಕ ಸೌತ್ ಜಿಲ್ಲೆ ಚಾಂಪಿಯನ್ಸ್, ದ.ಕ ವೆಸ್ಟ್ ಜಿಲ್ಲೆ ರನ್ನರ್ಸ್ ಟ್ರೋಫಿ ಪಡೆದರು. ಗ್ರೌಂಡ್ ಝೋನ್ ವಿಭಾಗದಲ್ಲಿ ದ.ಕ ಸೌತ್ ಜಿಲ್ಲೆ ಚಾಂಪಿಯನ್ಸ್, ದ.ಕ ಈಸ್ಟ್ ಜಿಲ್ಲೆ ರನ್ನರ್ಸ್ ಪಡೆದರು. ಹೈಝೋನ್ ವಿಭಾಗದಲ್ಲಿ ದ.ಕ ವೆಸ್ಟ್ ಜಿಲ್ಲೆಯ ಹಬೀಬ್ ಸಖಾಫಿ ಸುರತ್ಕಲ್ ಮತ್ತು ಗ್ರೌಂಡ್ ಝೋನ್ ವಿಭಾಗದಲ್ಲಿ ದ.ಕ ಸೌತ್ ಜಿಲ್ಲೆಯ ಶಹೀರ್ ಸಖಾಫಿ ವೈಯಕ್ತಿಕ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು.
ಎಸ್.ಜೆ.ಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಎಂ ಮುಹಮ್ಮದ್ ಮದನಿ ಪೂಡಲ್ ಸ್ವಾಗತಿಸಿದರು. ಎಸ್.ಜೆ.ಎಂ.ರಾಜ್ಯ ಕಾರ್ಯದರ್ಶಿ ಇಬ್ರಾಹಿಂ ನಯೀಮಿ ಕಾರ್ಯಕ್ರಮ ನಿರೂಪಿಸಿದರು. ರಾಜ್ಯ ಮುಅಲ್ಲಿಂ ಮೆಹರ್‌ಜಾನ್ ಕನ್ವೀನರ್ ಎ.ಎಂ ಇಸ್ಮಾಯಿಲ್ ಸಅದಿ ಅಲ್ ಅಫ್ಳಲೀ ಉರುಮಣೆ ವಂದಿಸಿದರು.