×
Ad

ರಜನಿಕಾಂತ್ ಸಿನೆಮಾ ವೀಕ್ಷಿಸಲು ಉದ್ಯೋಗಿಗಳಿಗೆ ರಜೆ ಘೋಷಿಸಿದ ಖಾಸಗಿ ಸಂಸ್ಥೆ

Update: 2023-08-08 18:23 IST

ಚೆನ್ನೈ: ಜೈಲರ್‌ ಸಿನೆಮಾ ನೋಡಲು ಖಾಸಗಿ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ರಜೆ ನೀಡಿದೆ.

ಯುನೊ ಅಕ್ವಾ ಕೇರ್‌ ಎಂಬ ಸಂಸ್ಥೆ ತನ್ನ ಕಂಪೆನಿ ಉದ್ಯೋಗಿಗಳಿಗೆ ರಜೆ ನೀಡಿರುವ ಆದೇಶ ಪತ್ರ ವೈರಲ್ ಆಗಿದೆ.

‘ಆಗಸ್ಟ್ 10ರಂದು ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಬಿಡುಗಡೆ ಪ್ರಯುಕ್ತ ನಾವು ರಜೆ ಘೋಷಿಸಿದ್ದೇವೆ. ಯುನೊ ಅಕ್ವಾ ಉದ್ಯೋಗಿಗಳಿಗೆ ಉಚಿತ ಟಿಕೆಟ್ ಕೂಡ ನೀಡುತ್ತಿದ್ದೇವೆ. ನಮ್ಮ ತಾತನ ಕಾಲಕ್ಕೆ, ತಂದೆಯ ಕಾಲಕ್ಕೆ, ನಮ್ಮ ಕಾಲಕ್ಕೆ, ನಮ್ಮ ಮಕ್ಕಳ ಮತ್ತು ಮೊಮ್ಮಕ್ಕಳ ಕಾಲಕ್ಕೆ ಒಬ್ಬರೇ ಸೂಪರ್ ಸ್ಟಾರ್’ ಎಂದು ಪತ್ರದಲ್ಲಿದೆ.

ಕಂಪನಿಯ ಚೆನ್ನೈ, ತಿರುಚಿ, ತಿರುನಲ್ವೇಲಿ ಸೇರಿದಂತೆ ಬೆಂಗಳೂರಿನ ಶಾಖೆಗೂ ರಜೆ ಅನ್ವಯವಾಗಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News