×
Ad

ಆಸ್ಕರ್ ಪ್ರಶಸ್ತಿ ಪ್ರದಾನ ಮಾಡಲಿರುವ ಪ್ರಿಯಾಂಕಾ ಚೋಪ್ರಾ

Update: 2026-03-06 16:53 IST

Photo Credit : x \ priyankachopra

ಆಸ್ಕರ್ ಅಕಾಡಮಿಯ ಘೋಷಣೆಯನ್ನು ಪ್ರಿಯಾಂಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ವಿಶ್ವದ ಅತಿದೊಡ್ಡ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭವಾದ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇತ್ತೀಚೆಗೆ ಆಸ್ಕರ್ ಅಕಾಡೆಮಿಯು 98ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಉಪಸ್ಥಿತರಿರುವ ತಾರೆಯರ ಹೆಚ್ಚುವರಿ ಹೆಸರುಗಳನ್ನು ಘೋಷಿಸಿದೆ. ರಾಬರ್ಟ್ ಡೌನಿ ಜೂನಿಯರ್ ಮತ್ತು ಆನ್ ಹ್ಯಾಥ್ವೇ ಜೊತೆಗೆ ಪ್ರಿಯಾಂಕಾ ಅವರ ಹೆಸರೂ ಸೇರ್ಪಡೆಯಾಗಿದೆ.

ಈ ಕುರಿತಂತೆ ಆಸ್ಕರ್ ಅಕಾಡಮಿಯ ಘೋಷಣೆಯನ್ನು ಪ್ರಿಯಾಂಕಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಮೊದಲೂ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಪ್ರಿಯಾಂಕ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.

Full View

ಪ್ರಿಯಾಂಕಾ ಈ ಮೊದಲು ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಳು ಮತ್ತು ಪ್ರೈಮ್ಟೈಮ್ ಎಮ್ಮಿ ಪ್ರಶಸ್ತಿಗಳನ್ನೂ ಪ್ರದಾನ ಮಾಡಿದ್ದಾರೆ.

ಈ ವರ್ಷದ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಲ್ ಅರ್ನೆಟ್, ರಾಬರ್ಟ್ ಡೌನಿ ಜೂನಿಯರ್, ಆನ್ ಹ್ಯಾಥ್ವೇ, ಪಾಲ್ ಮೆಸ್ಕಲ್ ಮತ್ತು ಗ್ವಿನೆತ್ ಪಾಲ್ಟ್ರೋ ಮೊದಲಾದವರು ನಿರೂಪನೆ ಮಾಡಲಿದ್ದಾರೆ. ಈ ಹಿಂದೆ ಘೋಷಿಸಲಾದ ಆಸ್ಕರ್ ನಿರೂಪಕರ ಪಟ್ಟಿಯಲ್ಲಿ ಆಡ್ರಿಯನ್ ಬ್ರಾಡಿ, ಜೇವಿಯರ್ ಬಾರ್ಡೆಮ್, ಕೀರನ್ ಕುಲ್ಕಿನ್, ಕ್ರಿಸ್ ಇವಾನ್ಸ್, ಚೇಸ್ ಇನ್ಫಿನಿಟಿ, ಮೈಕಿ ಮ್ಯಾಡಿಸನ್, ಡೆಮಿ ಮೂರ್, ಕುಮೈಲ್ ನಂಜಿಯಾನಿ, ಮಾಯಾ ರುಡಾಲ್ಫ್ ಮತ್ತು ಜೊಯಿ ಸಲ್ಡಾನಾ ಸೇರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News