×
Ad

ʼಯಾದವ್ ಜಿ ಕಿ ಲವ್ ಸ್ಟೋರಿʼ ಚಿತ್ರಕ್ಕೆ ನಿಷೇಧ ಕೋರಿ ಸಲ್ಲಿಸಿದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ದೇಶದ ಸಾಮಾಜಿಕ ಏಕತೆ ಹಾಳಾಗುತ್ತದೆಯೇ ಎಂದು ಪ್ರಶ್ನಿಸಿದ ನ್ಯಾಯಾಲಯ

Update: 2026-02-25 16:21 IST

ಯಾದವ್ ಜಿ ಕಿ ಲವ್ ಸ್ಟೋರಿ ಚಿತ್ರ (instagram.com), ಸುಪ್ರೀಂ ಕೋರ್ಟ್(PTI)

ಹೊಸದಿಲ್ಲಿ: 'ಯಾದವ್ ಜಿ ಕಿ ಲವ್ ಸ್ಟೋರಿ' ಚಿತ್ರವನ್ನು ನಿಷೇಧಿಸುವಂತೆ ಕೋರಿ ವಿಶ್ವ ಯಾದವ್ ಪರಿಷತ್ ಮುಖ್ಯಸ್ಥ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ.

"ಯಾದವ್ ಜಿ ಕಿ ಲವ್ ಸ್ಟೋರಿ" ಚಿತ್ರವನ್ನು ನಿಷೇಧಿಸಬೇಕು ಅಥವಾ ಹೆಸರು ಬದಲಾಯಿಸಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಈ ಚಿತ್ರವು ಯಾದವ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವುದಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠವು, ವಿಶ್ವ ಯಾದವ್ ಪರಿಷತ್ ಮುಖ್ಯಸ್ಥರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಈ ಚಿತ್ರದಲ್ಲಿ ಯಾದವ್ ಸಮುದಾಯದ ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಪ್ರೀತಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಈ ವೇಳೆ ಪೀಠವು, ಹಿಂದೂ ಯುವತಿ ಮುಸ್ಲಿಂ ಯುವಕನನ್ನು ಮದುವೆಯಾಗುವುದರಿಂದ ದೇಶದ ಸಾಮಾಜಿಕ ಏಕತೆ ಹಾಳಾಗುತ್ತದೆಯೇ?” ಎಂದು ಪ್ರಶ್ನಿಸಿದೆ.

ಚಿತ್ರದ ಶೀರ್ಷಿಕೆಯಲ್ಲಿ ಯಾದವ್ ಸಮುದಾಯವನ್ನು ಕೆಟ್ಟದಾಗಿ ಚಿತ್ರಿಸುವ ಯಾವುದೇ “ವಿಶೇಷಣ” ಅಥವಾ “ಪದವಿಲ್ಲ” ಎಂದು ನ್ಯಾಯಾಲಯ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News