×
Ad

ʼಟಾಕ್ಸಿಕ್ʼ ಸ್ಥಾನದಲ್ಲಿ ಬಿಡುಗಡೆಯಾಗುತ್ತಿದೆ ‘ಲವ್ ಮಾಕ್ಟೇಲ್- 3’ ಸಿನಿಮಾ

Update: 2026-03-05 14:45 IST

Photo: X/@KvnProductions

ಟಾಕ್ಸಿಕ್’ ಬಿಡುಗಡೆಗೊಳ್ಳದೆ ಇದ್ದರೂ, ಅದೇ ದಿನ ‘ಲವ್ ಮಾಕ್ಟೇಲ್-3’ ಬಿಡುಗಡೆ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.

ಯಶ್ ನಟನೆಯ ‘ಟಾಕ್ಸಿಕ್’ ಬಿಡುಗಡೆ ಮುಂದೆ ಹೋದ ಕಾರಣ ‘ಲವ್ ಮಾಕ್ಟೇಲ್-3’ ಪಾಲಿಗೆ ಅದೃಷ್ಟ ಖುಲಾಯಿಸಿದೆ. ಇದೀಗ ಮಾರ್ಚ್ 19ರಂದು ಯುಗಾದಿಯಂದು ಡಾರ್ಲಿಂಗ್ ಕೃಷ್ಣ ನಟಿಸಿರುವ ‘ಲವ್ ಮಾಕ್ಟೇಲ್- 3’ ಸಿನಿಮಾ ಬಿಡುಗಡೆಗೆ ಕೆವಿಎನ್ ಸಂಸ್ಥೆ ನಿರ್ಧರಿಸಿದೆ.

ಯುಗಾದಿ, ಈದ್ ಹಬ್ಬಗಳು ಸೇರಿದಂತೆ ಸಾಲು ಸಾಲು ರಜೆಗಳು ಬಂದಿರುವ ಕಾರಣ ಪ್ರೇಕ್ಷಕರು ಚಿತ್ರಮಂದಿರಗಳತ್ತ ಸಾಗುವ ನಿರೀಕ್ಷೆಯಿದೆ. ಸಿನಿಮಾವೊಂದು ಬಾಕ್ಸ್ ಆಫೀಸ್ ನಲ್ಲಿ ಗಳಿಕೆ ಮಾಡಲು ಇದು ಪ್ರಸಕ್ತ ಸಮಯ. ಹೀಗಾಗಿ ‘ಟಾಕ್ಸಿಕ್’ ಬಿಡುಗಡೆಗೊಳ್ಳದೆ ಇದ್ದರೂ, ಅದೇ ದಿನ ‘ಲವ್ ಮಾಕ್ಟೇಲ್-3’ ಬಿಡುಗಡೆ ಮಾಡುವ ಮೂಲಕ ಲಾಭ ಮಾಡಿಕೊಳ್ಳಲು ಕೆವಿಎನ್ ಸಂಸ್ಥೆ ತೀರ್ಮಾನಿಸಿದೆ.

‘ಲವ್ ಮಾಕ್ಟೇಲ್-3’ ಚಿತ್ರವು ಏಪ್ರಿಲ್ 10ರಂದು ಬಿಡುಗಡೆಗೆ ಸಜ್ಜಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ, ಯುಗಾದಿ ರಜೆಯಂತೇ ತೆರೆ ಕಾಣಲಿದೆ. ‘ಲವ್ ಮಾಕ್ಟೇಲ್’ ಮತ್ತು ‘ಲವ್ ಮಾಕ್ಟೇಲ್ 2’ ಈಗಾಗಲೇ ಯಶಸ್ವೀ ಸಿನಿಮಾಗಳಾಗಿರುವ ಕಾರಣದಿಂದ ಮೂರನೇ ಸಿನಿಮಾ ಮೇಲೂ ನಿರೀಕ್ಷೆ ಬೆಳೆದಿದೆ. ಈಗಾಗಲೇ ಹಾಡುಗಳು ಬಿಡುಗಡೆಯಾಗಿ ಗಮನ ಸೆಳೆದಿವೆ.

ಸಿನಿಮಾವನ್ನು ಕ್ರಿಸ್ಮಿ ಬ್ಯಾನರ್ ಅಡಿಯಲ್ಲಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣ ಮಾಡಿದ್ದಾರೆ. ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಸಂವೃತ, ಅಮೃತಾ ಅಯ್ಯಂಗಾರ್, ರಚೆಲ್ ಡೇವಿಡ್, ಅಭಿಲಾಶ್ ದಳಪತಿ ಮುಂತಾದವರು ತಾರಾಗಣದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News