×
Ad

ಸನ್ನಿ ಡಿಯೋಲ್‌ ಚಿತ್ರಕ್ಕೆ ಬಂಡವಾಳ ಹಾಕಲಿರುವ ಆಮಿರ್‌ ಖಾನ್

ʼಗದಾರ್‌ -2ʼ ಬಳಿಕ ಬಾಲಿವುಡ್ ನಲ್ಲಿ ಮತ್ತೆ ತನ್ನ ಚಾಪು ಮೂಡಿಸಿದ ಸನ್ನಿ ಡಿಯೋಲ್‌, ಆಮಿರ್‌ ಖಾನ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ರಾಜ್‌ ಕುಮಾರ್‌ ಸಂತೋಷಿ ನಿರ್ದೇಶನ ಮಾಡಲಿದ್ದು, ಆಮಿರ್‌ ಖಾನ್‌ ಪ್ರೊಡಕ್ಷನ್ಸ್ ಸಿನಿಮಾಕ್ಕೆ ಬಂಡವಾಳ ಹೂಡಲಿದೆ.

Update: 2023-10-03 19:51 IST

PHOTO : hindustantimes.com

ಮುಂಬೈ: ʼಗದಾರ್‌ -2ʼ ಬಳಿಕ ಬಾಲಿವುಡ್ ನಲ್ಲಿ ಮತ್ತೆ ತನ್ನ ಚಾಪು ಮೂಡಿಸಿದ ಸನ್ನಿ ಡಿಯೋಲ್‌, ಆಮಿರ್‌ ಖಾನ್‌ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾವನ್ನು ನಿರ್ದೇಶಕ ರಾಜಕುಮಾರ್ ಸಂತೋಷಿ ನಿರ್ದೇಶನ ಮಾಡಲಿದ್ದು, ಆಮಿರ್‌ ಖಾನ್‌ ಪ್ರೊಡಕ್ಷನ್ಸ್ ಸಿನಿಮಾಕ್ಕೆ ಬಂಡವಾಳ ಹೂಡಲಿದೆ.

‘ಲಾಹೋರ್ 1947’ ಎಂದು ಸಿನಿಮಾಕ್ಕೆ ಹೆಸರಿಡಲಾಗಿದೆ. ಆಮಿರ್‌ ಖಾನ್‌ ಅವರ ಪ್ರೊಡಕ್ಷನ್‌ ಹೌಸ್‌ ನಲ್ಲಿ ನಿರ್ಮಾಣವಾಗುತ್ತಿರುವ 17ನೇ ಸಿನಿಮಾ ಇದಾಗಿದೆ.

ಬಾಲಿವುಡ್‌ ನಲ್ಲಿ ವೃತ್ತಿ ಜೀವನದಲ್ಲಿ ಸಿನಿಮಾ ಬಿಡುಗಡೆಯ ಸಂದರ್ಭ ಮುಸುಕಿನ ಗುದ್ದಾಟ ನಡೆಸಿದ್ದ ನಟರು ಒಂದೇ ಬ್ಯಾನರ್‌ ನಡಿ ಕೆಲಸ ಮಾಡುತ್ತಿರುವುದು ಸಿನಿ ಪ್ರಿಯರಲ್ಲಿ ಕುತೂಹಲ ಮೂಡಿಸಿದೆ. 1990 ರಲ್ಲಿ ಆಮಿರ್ ಖಾನ್ ಅವರ ʼದಿಲ್ʼ ಮತ್ತು ಸನ್ನಿ ಡಿಯೋಲ್ ಅವರ ʼಘಾಯಲ್ʼ ಒಂದೇ ದಿನ ಬಿಡುಗಡೆ ಆಗಿತ್ತು. 1996 ರಲ್ಲಿ ʼರಾಜಾ ಹಿಂದೂಸ್ತಾನಿʼ, ಸನ್ನಿ ಡಿಯೋಲ್‌ ಅವರ ʼಘಾತಕ್ʼ, 2007 ರಲ್ಲಿ ʼಗದಾರ್‌ʼ ಬಿಡುಗಡೆ ದಿನವೇ ಆಮಿರ್‌ ಖಾನ್‌ ಅವರ ʼಲಗಾನ್ʼ ತೆರೆಯ ಮೇಲೆ ಬಂದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News