×
Ad

ಚಾಂಡ್ಲರ್ ಎಂದೇ ಖ್ಯಾತರಾಗಿದ್ದ ನಟ ಮ್ಯಾಥ್ಯೂ ಪೆರ್ರಿ ನಿಧನ

Update: 2023-10-29 11:03 IST

ಮ್ಯಾ‍ಥ್ಯೂ ಪೆರ್ರಿ (PhotoX/@FriendsTV)

ಲಾಸ್ ಏಂಜಲೀಸ್: ಭಾರಿ ಜನಪ್ರಿಯ ಟಿವಿ ಶೋ ‘ಫ್ರೆಂಡ್ಸ್’ನ ಖ್ಯಾತ ನಟ ಮ್ಯಾ‍ಥ್ಯೂ ಪೆರ್ರಿ ಶನಿವಾರ ತಮ್ಮ ನಿವಾಸದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಅಮೆರಿಕಾ ಮಾಧ್ಯಮಗಳು ವರದಿ ಮಾಡಿವೆ. ಅವರಿಗೆ 54 ವರ್ಷ ವಯಸ್ಸಾಗಿತ್ತು. ಪೆರ್ರಿ ತಮ್ಮ ನಿವಾಸದಲ್ಲಿನ ಬಾತ್ ಟಬ್ ನಲ್ಲಿ ಪ್ರಜ್ಞಾನಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು ಎಂದು ವರದಿಯಾಗಿದೆ.

“ನಾವು ಈ ಕುರಿತ ಕರೆಗೆ ಸಂಜೆ 4.30 ಗಂಟೆಗೆ ಸ್ಪಂದಿಸಿದೆವು. ಇದು 50 ವರ್ಷ ವಯಸ್ಸಿನ ಪುರುಷರೊಬ್ಬರ ಕುರಿತ ಸಾವಿನ ತನಿಖೆಯಾಗಿದೆ” ಎಂದು ಸಂತ್ರಸ್ತ ವ್ಯಕ್ತಿಯ ಹೆಸರನ್ನು ದೃಢಪಡಿಸದೆ ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ವಕ್ತಾರರು AFP ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

‘ಕೊಳ, ಸ್ಪಾ, ಸ್ನಾನದ ಟಬ್ ಅಥವಾ ಕಾರಂಜಿ’ಯನ್ನು ಉಲ್ಲೇಖಿಸಿ ಹೇಳಲಾಗುವ ತುರ್ತು ಜಲ ಅವಘಡ ಕರೆಗೆ ನಾವು ಸ್ಪಂದಿಸಿದೆವು ಎಂದು ಅಗ್ನಿಶಾಮಕ ಇಲಾಖೆಯ ವಕ್ತಾರರೊಬ್ಬರು ದೃಢಪಡಿಸಿದ್ದರೂ, ಪೆರ್ರಿ ನೀರಿನಲ್ಲಿ ಮುಳುಗಿದ್ದಾರೆ ಎಂಬ ಸುದ್ದಿಯನ್ನು ಅವರೂ ದೃಢಪಡಿಸಿಲ್ಲ.

1994-2004ರವರೆಗೆ 10 ಋತುವಿನಲ್ಲಿ ಪ್ರಸಾರವಾದ ಜನಪ್ರಿಯ ‘ಫ್ರೆಂಡ್ಸ್’ ಟಿವಿ ಶೋನಲ್ಲಿ ಚಾಂಡ್ಲರ್ ಬಿಂಗ್ ಪಾತ್ರ ನಿರ್ವಹಿಸುವ ಮೂಲಕ ಪೆರ್ರಿ ಖ್ಯಾತರಾಗಿದ್ದರು.

ಅವರು ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದಿದ್ದರು.

ಪೆರ್ರಿ ಸಂಬಂಧಿಕರು ಈ ಕುರಿತು ತಕ್ಷಣವೇ ಪ್ರತಿಕ್ರಿಯೆಗೆ ದೊರೆತಿಲ್ಲ ಎಂದು AFP ಸುದ್ದಿ ಸಂಸ್ಥೆ ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News