×
Ad

ನಟಿ ನೂರ್‌ ಮಾಲಬಿಕಾ ದಾಸ್‌ ಆತ್ಮಹತ್ಯೆ

Update: 2024-06-10 17:24 IST

ನಟಿ ನೂರ್‌ ಮಾಲಬಿಕಾ ದಾಸ್‌ (Photo: Instagram)

ಮುಂಬೈ: ಡಿಸ್ನಿ ಪ್ಲುಸ್‌ ಹಾಟ್‌ಸ್ಟಾರ್‌ನ ಜನಪ್ರಿಯ ಧಾರಾವಾಹಿ ʼದಿ ಟ್ರಯಲ್ʼ ನಲ್ಲಿ ನಟಿಸಿದ ನಟಿ ನೂರ್‌ ಮಾಲಬಿಕಾ ದಾಸ್‌ ಮುಂಬೈನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.

ಅವರ ಅಪಾರ್ಟ್‌ಮೆಂಟ್‌ನಿಂದ ಕೆಟ್ಟ ವಾಸನೆ ಬರುತ್ತಿರುವ ಬಗ್ಗೆ ನೆರೆಹೊರೆಯವರು ದೂರಿದ ನಂತರ ಪೊಲೀಸರು ಪರಿಶೀಲಿಸಿದಾಗ ಆಕೆಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮೂವತ್ತೆರಡು ವರ್ಷದ ನಟಿ ಅಸ್ಸಾಂ ಮೂಲದವರಾಗಿದ್ದಾರೆ. ಈ ಹಿಂದೆ ಅವರು ಕತಾರ್‌ ಏರ್‌ವೇಸ್‌ನಲ್ಲಿ ಗಗನಸಖಿಯಾಗಿದ್ದರು. ಸಿಸ್ಕಿಯಾನ್‌, ವಾಕಮನ್‌, ಟೀಖಿ ಚಟ್ನಿ, ಜಘ್ನಯಾ ಉಪಾಯ, ಚಾರಾಮ್ಸುಖ್‌, ದೇಖಿ ಅನ್‌ದೇಖಿ ಮತ್ತು ಬ್ಯಾಕ್‌ರಾಡ್‌ ಹಸ್ಲ್ ಸಹಿತ ಕೆಲ ಚಲನಚಿತ್ರಗಳು ಮತ್ತು ವೆಬ್‌ ಸರಣಿಗಳಲ್ಲಿ ಅವರು ನಟಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News