ಕಾರು ಅಪಘಾತ: ನಟ ಪರ್ವಿನ್ ದಬಾಸ್ ಗೆ ಐಸಿಯುನಲ್ಲಿ ಚಿಕಿತ್ಸೆ
Update: 2024-09-21 12:17 IST
Photo: Parvin Dabas/Instagram
ಮಹಾರಾಷ್ಟ್ರ: ಕಾರು ಅಪಘಾತದಲ್ಲಿ ನಟ ಪರ್ವಿನ್ ದಬಾಸ್ ಗಂಭೀರವಾಗಿ ಗಾಯಗೊಂಡಿದ್ದು, ಸಬ್ ಅರ್ಬನ್ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ಅವರನ್ನು ದಾಖಲಿಸಲಾಗಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದೆ.
ದಬಾಸ್(50) ಅವರು ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಚಲನಚಿತ್ರಗಳಾದ "ಮಾನ್ಸೂನ್ ವೆಡ್ಡಿಂಗ್", "ಮೈನೆ ಗಾಂಧಿ ಕೊ ನಹಿನ್ ಮಾರಾ", "ಖೋಸ್ಲಾ ಕಾ ಘೋಸ್ಲಾ", "ದಿ ಪರ್ಫೆಕ್ಟ್ ಹಸ್ಬೆಂಡ್" ಮತ್ತು "ದಿ ವರ್ಲ್ಡ್ ಅನ್‌ಸೀನ್" ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು.
ಪರ್ವಿನ್ ದಬಾಸ್ ಬಾಂದ್ರಾದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಪತ್ನಿ, ನಟಿ ಪ್ರೀತಿ ಜಿಂಗಿಯಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.