×
Ad

ನಟ ರಕ್ಷಿತ್ ಶೆಟ್ಟಿಗೆ ಬಂಧನ ಭೀತಿ; ನಿರೀಕ್ಷಣಾ ಜಾಮೀನು ಕೋರಿ ಅರ್ಜಿ

Update: 2024-07-20 21:28 IST

ನಟ ರಕ್ಷಿತ್ ಶೆಟ್ಟಿ (Photo:Instagram)

ಬೆಂಗಳೂರು: ಕಾಪಿರೈಟ್ಸ್ (Copyright) ಉಲ್ಲಂಘನೆ ಆರೋಪದಲ್ಲಿ ನಟ, ನಿರ್ದೇಶಕ ರಕ್ಷಿತ್ ಶೆಟ್ಟಿಗೆ ಬಂಧನದ ಭೀತಿ ಎದುರಾಗಿದ್ದು, ಜಾಮೀನಿಗಾಗಿ ಸೆಷನ್ಸ್ ಕೋರ್ಟ್ ಮೊರೆ ಹೋಗಿದ್ದಾರೆ.

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಸಿಸಿಎಚ್ 61 ಕೋರ್ಟ್ ಮುಂದಿನ ವಿಚಾರಣೆಯನ್ನು ಜುಲೈ 24ಕ್ಕೆ ಮುಂದೂಡಿದೆ. ರಕ್ಷಿತ್ ಶೆಟ್ಟಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಸಮಯ ಕೋರಿದ್ದು, ಸರ್ಕಾರದ ಪಿಪಿಯಿಂದ ನ್ಯಾಯಾಲಯಕ್ಕೆ ಸಮಯ ಕೋರಲಾಗಿದೆ. ಮನವಿ ಪುರಸ್ಕರಿಸಿದ ನ್ಯಾಯಧೀಶರಾದ ಪ್ರಕಾಶ್ ಸಂಗಪ್ಪ ಎಚ್, ಅರ್ಜಿಯ ವಿಚಾರಣೆ ಬುಧವಾರಕ್ಕೆ ಮುಂದೂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News