×
Ad

ಹೃತಿಕ್‌-ಪ್ರೀತಿ ಝಿಂಟಾ ಜೋಡಿಯ ʼಕೋಯಿ ಮಿಲ್‌ಗಯಾʼ ಚಿತ್ರಕ್ಕೆ 20 ರ ಸಂಭ್ರಮ: ಆಗಸ್ಟ್‌ 4 ರಂದು ರಿ-ರಿಲೀಸ್.!

Update: 2023-08-03 14:30 IST

Photo credit: IMDb

ಹೃತಿಕ್ ರೋಶನ್ ಮತ್ತು ಪ್ರೀತಿ ಝಿಂಟಾ ಅಭಿನಯದ 'ಕೋಯಿ ಮಿಲ್ ಗಯಾ' ಆಗಸ್ಟ್ 8ರಂದು 20 ವರ್ಷ ಪೂರ್ಣಗೊಳಿಸಲಿದೆ. ಈ ವಿಶೇಷ ನೆನಪಿಗಾಗಿ ಚಿತ್ರ ನಿರ್ಮಾಪಕರು ಈ ಚಿತ್ರವನ್ನು 30 ನಗರಗಳಲ್ಲಿ ಮರು ಬಿಡುಗಡೆಗೆ ನಿರ್ಧರಿಸಿದ್ದಾರೆ. ಚಿತ್ರೋದ್ಯಮ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, "ಕೋಯಿ.. ಮಿಲ್ ಗಯಾ" ಆಗಸ್ಟ್ 4ರಿಂದ 10ರ ಒಳಗೆ ಮತ್ತೆ ತೆರೆ ಕಾಣಲಿದೆ. ಪಿವಿಆರ್ ಮತ್ತು ಐನಾಕ್ಸ್‍ಗಳಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ. "ರಾಕೇಶ್ ರೋಷನ್- ಹೃತಿಕ್ ರೋಷನ್: ಕೋಯಿ.. ಮಿಲ್ ಗಯಾ 20ನೇ ವರ್ಷಾಚರಣೆ ಸಜ್ಜಾಗಿದೆ. 30 ನಗರಗಲ್ಲಿ ಇದು ಮರು ಬಿಡುಗಡೆಯಾಗಲಿದೆ. ಕೋಯಿ.. ಮಿಲ್ ಗಯಾದ 20ನೇ ವರ್ಷದ ಸಂದರ್ಭದಲ್ಲಿ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ಚಿತ್ರ ಪಿವಿಆರ್ ಹಾಗೂ ಐನಾಕ್ಸ್ ಸಿನಿಮಾಗಳಲ್ಲಿ ಆಗಸ್ಟ್ 4ರಿಂದ ಭಾರತದ 30 ನಗರಗಳಲ್ಲಿ ಬಿಡುಗಡೆಯಾಗಲಿದೆ" ಎಂದು ಟ್ವೀಟ್ ಮಾಡಿದ್ದಾರೆ.

ಇದರ ಮನರಂಜನಾತ್ಮಕ ಅಂಶ, ಮಿಂಚಿನಂಥ ಸೌಂಡ್‍ಟ್ರ್ಯಾಕ್, ಪ್ರಭಾವಿ ಕಥಾಹಂದರ, ಹೃತಿಕ್ ರೋಷನ್ ಅವರ ಅದ್ಭುತ ನಟನೆ ಹಾಗೂ ಜಾದೂ ಕಾರಣಗಳಿಂದಾಗಿ 20 ವರ್ಷಗಳ ಬಳಿಕವೂ ಕೋಯಿ.. ಮಿಲ್ ಗಯಾ ಜನರ ನೆನಪಿನ ಬುತ್ತಿಯಲ್ಲಿದೆ. ರಾಕೇಶ್ ರೋಷನ್ ನಿರ್ದೇಶನದ ಚಿತ್ರಕ್ಕೆ ರಾಜೇಶ್ ರೋಷನ್ ಸಂಗೀತವಿದೆ. ಹೃತಿಕ್ ರೋಷನ್, ಪ್ರೀತಿ ಝಿಂಟಾ ಹಾಗೂ ರೇಖಾ ಪ್ರಮುಖ ತಾರಾಬಳಗದಲ್ಲಿದ್ದಾರೆ.

ಕೋಯಿ.. ಮಿಲ್ ಗಯಾ 20ನೇ ವರ್ಷಾಚರಣೆ ಸಂದರ್ಭದಲ್ಲಿ ಕೃಷ್-4ನ ಘೋಷಣೆಗೆ ಉದ್ದೇಶಿಸಲಾಗಿದೆ ಎಂಬ ಮಾತೂ ಕೇಳಿ ಬರುತ್ತಿದೆ. ಕೋಯಿ.. ಮಿಲ್ ಗಯಾ, ಕೃಷ್ ಸರಣಿಗೆ ಆಧಾರವಾಗಿತ್ತು. ಹೃತಿಕ್ ರೋಷನ್ ಅಭಿನಯದ ಕೃಷ್-3 2013ರಲ್ಲಿ ಬಿಡುಗಡೆಯಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News