×
Ad

ಶಂಕರ್‌ ಮಹದೇವನ್‌, ಝಾಕೀರ್‌ ಹುಸೈನ್‌ಗೆ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿ

Update: 2024-02-05 11:24 IST

Photo credit: X/ANI - X/@RecordingAcad

ಲಾಸ್‌ ಏಂಜಲೀಸ್:‌ ಭಾರತದ ಖ್ಯಾತ ಸಂಗೀತಗಾರರಾದ ಶಂಕರ್‌ ಮಹದೇವನ್‌ ಹಾಗೂ ಝಾಕೀರ್‌ ಹುಸೈನ್‌ ಅವರ ಫ್ಯೂಷನ್‌ ಬ್ಯಾಂಡ್‌ ಶಕ್ತಿ ತನ್ನ ಲೇಟೆಸ್ಟ್‌ ಆಲ್ಬಂ “ದಿಸ್‌ ಮೂಮೆಂಟ್‌ʼಗಾಗಿ ರವಿವಾರ ನಡೆದ 66ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬೆಸ್ಟ್‌ ಗ್ಲೋಬಲ್‌ ಮ್ಯೂಸಿಕ್‌ ಆಲ್ಬಂಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಮಹದೇವನ್‌ ಮತ್ತು ಇನ್ನೋರ್ವ ಬ್ಯಾಂಡ್‌ ಸದಸ್ಯ ಗಣೇಶ್‌ ರಾಜಗೋಪಾಲನ್‌ ಅವರು ಸ್ವೀಕರಿಸುತ್ತಿರುವ ಚಿತ್ರವನ್ನು ರೆಕಾರ್ಡಿಂಗ್‌ ಅಕಾಡೆಮಿ ತನ್ನ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲಿ ಪೋಸ್ಟ್‌ ಮಾಡಿದೆ.

ಶಕ್ತಿ ಬ್ಯಾಂಡ್‌ನ ಆಲ್ಬಂ “ದಿ ಮೂಮೆಂಟ್”‌ ಜೂನ್‌ 30, 2023ರಂದು ಬಿಡುಗಡೆಗೊಂಡಿತ್ತು. ಅದು ಒಟ್ಟು ಎಂಟು ಹಾಡುಗಳನ್ನು ಹೊಂದಿದೆ. ಈ ಹಾಡುಗಳಿಗೆ ಝಾಕೀರ್‌ ಹುಸೈನ್‌ (ತಬ್ಲಾ), ಜಾನ್‌ ಮೆಕ್‌ಲಾಲಿನ್‌ (ಗಿಟಾರ್‌ ಸಿಂಥ್)‌, ಶಂಕರ್‌ ಮಹದೇವನ್‌ (ಗಾಯನ), ಗಣೇಶ್‌ ರಾಜಗೋಪಾಲನ್‌ (ವಾಯಿಲಿನ್)‌ ಮತ್ತು ವಿ ಸೆಲ್ವಗಣೇಶ್‌ (ಪರ್ಕಶನಿಸ್ಟ್)‌ ಸಾಥ್‌ ನೀಡಿದ್ದಾರೆ.

ಝಾಕಿರ್‌ ಹುಸೈನ್‌ ಅವರು ಬೇಲಾ ಫ್ಲೆಕ್‌ ಮತ್ತು ಎಡ್ಗರ್‌ ಮೇಯರ್‌ ಜೊತೆ “ಪಾಶ್ತೋ” ಗೆ ನೀಡಿದ ಕೊಡುಗೆಗಾಗಿ ಬೆಸ್ಟ್‌ ಗ್ಲೋಬಲ್‌ ಮ್ಯೂಸಿಕ್‌ ಪರ್ಫಾರ್ಮೆನ್ಸ್‌ಗಾಗಿ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದುಕೊಂಡಿದಾರೆ. ಈ ಹಾಡಿಗಾಗಿ ಕೊಳಲಿನಲ್ಲಿ ರಾಕೇಶ್‌ ಚೌರಾಸಿಯಾ ಸಹಕರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News