×
Ad

ಶತದಿನೋತ್ಸವದತ್ತ ‘ಪಯಣ್’ ಕೊಂಕಣಿ ಸಿನೆಮಾ

Update: 2024-12-27 15:50 IST

ಮಂಗಳೂರು, ಡಿ.27: ಸಂಗೀತ್ ಘರ್ ಬ್ಯಾನರ್ನಡಿಯಲ್ಲಿ ಯೊಡ್ಲಿಂಗ್ ಕಿಂಗ್ ಮೆಲ್ವಿನ್ ಪೆರಿಸ್ ಮತ್ತು ನೀಟ ಪೆರಿಸ್ ನಿರ್ಮಿಸಿರುವ, ಬಿಡುಗಡೆಗೊಂಡ ದಿನದಿಂದಲೇ ಜನಮನ ಗೆದ್ದ ‘ಪಯಣ್’ ಕೊಂಕಣಿ ಚಲನಚಿತ್ರವು ನೂರನೇ ದಿನದತ್ತ ದಾಪುಗಾಲು ಹಾಕುತ್ತಿದೆ.

ಸೀಮಿತ ಮಾರುಕಟ್ಟೆಯಿರುವ ಕೊಂಕಣಿ ಸಮಾಜದ ಸಿನೆಮಾವೊಂದು ನೂರು ದಿನಗಳ ಪ್ರದರ್ಶನವನ್ನು ಕಾಣುವುದು ದಾಖಲೆಯಾಗಿದ್ದು, ಕಳೆದ ವರ್ಷ ತೆರೆಕಂಡ ‘ಅಸ್ಮಿತಾಯ್’ ಕೊಂಕಣಿ ಚಲನಚಿತ್ರದ ಬಳಿಕ ನೂರು ದಿನಗಳ ಪ್ರದರ್ಶನ ಕಂಡ ದ್ವಿತಿಯ ಚಿತ್ರವಾಗಿ ‘ಪಯಣ್’ ಮೂಡಿಬಂದಿದೆ.

ಶತದಿನೋತ್ಸವ ಸಂಭ್ರಮವು ಡಿಸೆಂಬರ್ 29ರಂದು ಸಂಜೆ 4 ಗಂಟೆಗೆ ಸರಿಯಾಗಿ ಬಿಜೈನಲ್ಲಿರುವ ಭಾರತ್ ಸಿನೆಮಾದಲ್ಲಿ ನಡೆಯಲಿದೆ. ಈ ಸಮಾರಂಭಕ್ಕೆ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮುಖ್ಯ ಅಥಿತಿಯಾಗಿ ಆಗಮಿಸಲಿರುವರು. ಸಂತ ಅಲೋಶಿಯಸ್ ಸಮೂಹ ವಿದ್ಯಾ ಸಂಸ್ಥೆಗಳ ರೆಕ್ಟರ್ ವಂ. ಮೆಲ್ವಿನ್ ಜೋಸೆಫ್ ಪಿಂಟೊ ಮತ್ತು ಅನಿವಾಸಿ ಉಧ್ಯಮಿ ಜೇಮ್ಸ್ ಡಿಸೋಜ ದುಬೈ ಗೌರವ ಅಥಿತಿಗಳಾಗಿರುವರು.

ಪಯಣ್ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆಯನ್ನು ನಿರ್ದೇಶಕ ಜೊಯೆಲ್ ಪಿರೇರ ಬರೆದಿದ್ದು, ರೋಶನ್ ಡಿಸೋಜ ಆಂಜೆಲೊರ್ ಸಂಗೀತ ನಿರ್ದೇಶನ ನೀಡಿದ್ದಾರೆ. ಪುತ್ತೂರಿನ ಯುವ ಪ್ರತಿಭೆ ಬ್ರಾಯನ್ ಸಿಕ್ಟೇರ ನಾಯಕನಾಗಿ ಹಾಗೂ ಜಾಸ್ಮಿನ್ ಡಿಸೋಜ, ಕೇಟ್ ಪಿರೇರ ಮತ್ತು ಶೈನಾ ಡಿಸೋಜ ನಾಯಕಿಯರಾಗಿ ನಟಿಸಿದ್ದಾರೆ. ನಟರಾದ ರೈನಲ್ ಸಿಕ್ವೇರ, ಲೆಸ್ಲಿ ರೇಗೊ, ಜೆರಿ ರಸ್ಕಿನ್ನಾ, ವಾಲ್ಟರ್ ನಂದಳಿಕೆ, ಜೀವನ್ ವಾಸ್, ಜೊಸ್ಸಿ ರೇಗೊ, ಆಲ್ವಿನ್ ದಾಂತಿ, ಆಲ್ಬರ್ಟ್ ಪೆರಿಸ್, ಅರುಣ್ ನೊರೊನ್ಹ, ಡೆನ್ವರ್ ಪೆರಿಸ್, ಡೆನ್ವರ್ ಡಿಸೋಜ, ಮೆಲಿಶಾ ಪಿಂಟೊ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಸಾಹಿತ್ಯ ಮತ್ತು ರಾಗ ಸಂಯೋಜನ್ ಮೆಲ್ವಿನ್ ಪೆರಿಸ್, ಛಾಯಾಗ್ರಹಣ ವಿ. ರಾಮಾಂಜನೆಯ ಮತ್ತು ಮೆವಿನ್ ಜೊಯೆಲ್ ಪಿಂಟೊ, ಶಿರ್ತಾಡಿ ಸಂಕಲನ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News