×
Ad

ಲೈಂಗಿಕ ಕಿರುಕುಳ ಆರೋಪ : ಮಲಯಾಳಂ ನಟಿ ರೇವತಿ ಸಂಪತ್ ವಿರುದ್ಧ ನಟ ಸಿದ್ದೀಕ್ ಪ್ರತಿ ದೂರು

Update: 2024-08-26 14:57 IST

ನಟ ಸಿದ್ದೀಕ್ (PTI)

ತಿರುವನಂತಪುರಂ : ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪಿಸಿದ ಮಲಯಾಳಂ ನಟಿ ರೇವತಿ ಸಂಪತ್ ವಿರುದ್ಧ ಮಲಯಾಳ ಚಲನಚಿತ್ರ ಕಲಾವಿದರ ಸಂಘ ಅಮ್ಮಾದ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಪ್ರತಿ ದೂರು ದಾಖಲಿಸಿದ್ದಾರೆ ಎಂದು ANI ಸುದ್ದಿಸಂಸ್ಥೆ ವರದಿ ಮಾಡಿದೆ.

ದೂರು ಸಲ್ಲಿಸಿರುವುದನ್ನು ಕೇರಳ ಪೊಲೀಸರು ಖಚಿತಪಡಿಸಿದ್ದಾರೆ.

ನಟಿ ತಮ್ಮ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಹಿನ್ನೆಲೆಯಲ್ಲಿ ಸಿದ್ದೀಕ್ ಅವರು ಮಲಯಾಳ ಚಲನಚಿತ್ರ ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರವಿವಾರ ರಾಜೀನಾಮೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News