×
Ad

ಮಲಯಾಳಂನ ಹಿರಿಯ ನಟಿ ಆರ್. ಸುಬ್ಬಲಕ್ಷ್ಮಿ ನಿಧನ

Update: 2023-12-01 11:53 IST

ಆರ್.ಸುಬ್ಬಲಕ್ಷ್ಮಿ (Photo: X/@aneesh_98)

ತಿರುವನಂತಪುರಂ: ಮಲಯಾಳಂನ ಖ್ಯಾತ ನಟಿ, ಕರ್ನಾಟಕ ಸಂಗೀತಗಾರ್ತಿ ಹಾಗೂ ವರ್ಣಚಿತ್ರ ಕಲಾವಿದೆ ಆರ್.ಸುಬ್ಬಲಕ್ಷ್ಮಿ ಗುರುವಾರ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸುಬ್ಬಲಕ್ಷ್ಮಿ ಅವರು ಮಲಯಾಳಂ ಚಿತ್ರಗಳಲ್ಲಿನ ಖ್ಯಾತ ಪೋಷಕ ನಟಿಯಾಗಿದ್ದರು. ಅವರು ಬಹುತೇಕ ಅಜ್ಜಿಯ ಪಾತ್ರಗಳನ್ನು ತಮ್ಮ ನಾಜೂಕು ಹಾಗೂ ಕೌಶಲದಿಂದ ಅತ್ಯುತ್ತಮವಾಗಿ ನಿರ್ವಹಿಸುತ್ತಿದ್ದರು.

ಜನಪ್ರಿಯ ಚಲನಚಿತ್ರಗಳಾದ ಕಲ್ಯಾಣರಾಮನ್ (2002), ಪಂಡಿಪ್ಪಡ (2005) ಹಾಗೂ ನಂದನಂ (2002) ಸೇರಿದಂತೆ ಹಲವಾರು ಮಲಯಾಳಂ ಚಿತ್ರಗಳಲ್ಲಿನ ತಮ್ಮ ಪಾತ್ರಗಳಿಂದಾಗಿ ಅವರು ಭಾರಿ ಜನಪ್ರಿಯರಾಗಿದ್ದರು.

ಸುಬ್ಬಲಕ್ಷ್ಮಿ ಅವರ ನಿಧನಕ್ಕೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹಾಗೂ ಚಿತ್ರ ನಟ ದಿಲೀಪ್ ಸಂತಾಪ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News