×
Ad

ಮಲಯಾಳಂ ಕಿರುತೆರೆ ನಟಿ ಡಾ. ಪ್ರಿಯಾ ಹೃದಯಾಘಾತದಿಂದ ನಿಧನ

Update: 2023-11-01 18:22 IST

ಡಾ. ಪ್ರಿಯಾ (Photo: mathrubhumi.com)

ತಿರುವನಂತಪುರಂ: ನಟಿ ರೆಂಜುಷಾ ಮೆನನ್‌ ಆತ್ಮಹತ್ಯೆಯ ಬೆನ್ನಲ್ಲೇ ಕೇರಳ ಚಿತ್ರೋದ್ಯಮಕ್ಕೆ ಇನ್ನೊಂದು ಆಘಾತ ಎದುರಾಗಿದೆ. ಜನಪ್ರಿಯ ಮಲಯಾಳಂ ಕಿರುತೆರೆ ನಟಿ ಹಾಗೂ ವೈದ್ಯೆ ಡಾ. ಪ್ರಿಯಾ ಬುಧವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮೂವತ್ತೈದು ವರ್ಷದ ಪ್ರಿಯಾ ಎಂಟು ತಿಂಗಳ ಗರ್ಭಿಣಿಯಾಗಿದ್ದರು. ಆಕೆಯ ಶಿಶುವನ್ನು ಪ್ರಸ್ತುತ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.

ಡಾ. ಪ್ರಿಯಾ ಅವರು “ಕರುತಮುತ್ತು”ವಿನಲ್ಲಿನ ತಮ್ಮ ಪಾತ್ರದಿಂದ ಜನಪ್ರಿಯರಾಗಿದ್ದರು. ವಿವಾಹದ ನಂತರ ನಟನೆಯಿಂದ ಬ್ರೇಕ್‌ ಪಡೆದಿದ್ದರು. ಆಕೆ ಎಂಡಿ ಶಿಕ್ಷಣ ಕೂಡ ಮುಂದುವರಿಸುತ್ತಿದ್ದರು ಹಾಗೂ ತಿರುವನಂತಪುರಂನ ಪಿಆರ್‌ಎಸ್‌ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News