×
Ad

ಅ.16ಕ್ಕೆ ಟೈಗರ್‌– 3 ಟ್ರೇಲರ್ ಬಿಡುಗಡೆ

Update: 2023-10-11 19:04 IST

Photo : yashrajfilms

ಮುಂಬೈ: ಮನೀಶ್‌ ಶರ್ಮಾ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಟೈಗರ್‌– 3 ದೀಪಾವಳಿಗೆ ಬಿಡುಗಡೆಯಾಗಲಿದೆ. 

ಈ ಕುರಿತು x ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನಟ ಸಲ್ಮಾನ್‌ ಖಾನ್‌, ದೀಪಾವಳಿ ಹಬ್ಬಕ್ಕೆ ಟೈಗರ್‌–3 ಚಿತ್ರ ತೆರೆಕಾಣಲಿದೆ. ಅ.16ಕ್ಕೆ ಟ್ರೇಲರ್ ಬಿಡುಗಡೆಯಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಈ ಚಿತ್ರದಲ್ಲಿ ಶಾರುಕ್‌ ಖಾನ್‌ ಹಾಗೂ ಸಲ್ಮಾನ್‌ ಖಾನ್‌ ಜೊತೆಯಾಗಿ ಕಾಣಿಸಿಕೊಳ್ಳುವ ದೃಶ್ಯದ ಚಿತ್ರೀಕರಣಕ್ಕೆ ₹ 35 ಕೋಟಿ ಸೆಟ್‌ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಕತ್ರೀನಾ ಕೈಫ್‌, ಇಮ್ರಾನ್‌ ಹಶ್ಮಿ, ರಿದ್ಧಿ ಡೋಗ್ರಾ ಸೇರಿದಂತೆ ಅನೇಕ ನಟ– ನಟಿಯರು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಯಶ್‌ ರಾಜ್‌ ಫಿಲ್ಮ್ ಬ್ಯಾನರ್‌ನೊಂದಿಗೆ ಆದಿತ್ಯ ಚೋಪ್ರಾ ಅವರು ಈ ಸಿನೆಮಾವನ್ನು ನಿರ್ಮಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News