×
Ad

ಸೂಪರ್‌ಸ್ಟಾರ್‌ ರಜನೀಕಾಂತ್ ಚೆನ್ನೈ ಆಸ್ಪತ್ರೆಗೆ ದಾಖಲು : ವರದಿ

Update: 2024-10-01 08:58 IST

Photo : x/@TweetsOfSunil

ಚೆನ್ನೈ: ಸೂಪರ್ ಸ್ಟಾರ್ ರಜನೀಕಾಂತ್ ಅವರನ್ನು ಸೋಮವಾರ ತಡರಾತ್ರಿ ಚೆನ್ನೈ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಹೃದಯ ಸಂಬಂಧಿ ಚಿಕಿತ್ಸೆಯನ್ನು ಮಂಗಳವಾರ ನಡೆಸಲಾಗುವುದು ಎಂದು ಮೂಲಗಳು ಹೇಳಿದ್ದು, ಅವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ಸ್ಪಷ್ಟಪಡಿಸಿವೆ.

ಆದರೆ ಆಸ್ಪತ್ರೆಯಿಂದ ಅಥವಾ ಅವರ ಕುಟುಂಬದಿಂದ ಈ ಬಗ್ಗೆ ಇದುವರೆಗೆ ಯಾವುದೇ ಸ್ಪಷ್ಟನೆ ಬಂದಿಲ್ಲ.

76 ವರ್ಷ ವಯಸ್ಸಿನ ನಟ, ಜ್ಞಾನವೇಲು ರಾಜಾ ಅವರ ʼವೆಟ್ಟಾಯಿನ್ʼ ಮತ್ತು ಲೋಕೇಶ್ ಕನಗರಾಜ ಅವರ ʼಕೂಲಿʼ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ʼವೆಟ್ಟಾಯಿನ್ʼ ಚಿತ್ರ ಅಕ್ಟೋಬರ್ 10ರಂದು ತೆರೆಕಾಣಲಿದೆ. ಕೆಲ ದಿನಗಳ ಹಿಂದಷ್ಟೇ ರಜನೀಕಾಂತ್ ಚೆನ್ನೈಗೆ ವಾಪಸ್ಸಾಗಿದ್ದರು.

ಒಂದು ದಶಕದ ಹಿಂದೆ ಸೂಪರ್ ಸ್ಟಾರ್, ಸಿಂಗಾಪುರದಲ್ಲಿ ಕಿಡ್ನಿ ಕಸಿಗೆ ಒಳಗಾಗಿದ್ದರು. ಇತ್ತೀಚೆಗೆ ಅನಾರೋಗ್ಯದ ಕಾರಣ ನೀಡಿ ರಾಜಕೀಯಕ್ಕೆ ಬರುವ ನಿರ್ಧಾರದಿಂದ ದೂರ ಉಳಿದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News