ಹಿರಿಯ ನಟ ಸತೀಶ್ ಶಾ ನಿಧನ
Update: 2025-10-25 16:28 IST
ನಟ ಸತೀಶ್ ಶಾ (Photo: X)
ಹೊಸದಿಲ್ಲಿ: ಬಾಲಿವುಡ್ ಹಿರಿಯ ನಟ ಸತೀಶ್ ಶಾ ಶನಿವಾರ ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ನಿಧನರಾದರು.
ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ನಟ ಸತೀಶ್ ಶಾ, ಇತ್ತೀಚೆಗೆ ಅಂಗಾಂಗ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶನಿವಾರ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ನಟ ಸತೀಶ್ ಶಾ ಅವರು ʼಸಾರಾಭಾಯಿ ವರ್ಸಸ್ ಸಾರಾಭಾಯಿʼ, ʼಜಾನೆ ಭಿ ದೋ ಯಾರೋʼ ಮತ್ತು ʼಮೈ ಹೂಂ ನಾʼ ಚಿತ್ರಗಳಲ್ಲಿನ ಪಾತ್ರಗಳಿಗೆ ಜನಪ್ರಿಯರಾಗಿದ್ದರು.