ನಿತಿನ್ ದೇಸಾಯಿ ಅಂತ್ಯಕ್ರಿಯೆಯಲ್ಲಿ ಕಡಿಮೆ ಜನ ಇದ್ದಿದ್ದೇಕೆ?: ಆಮಿರ್ ಖಾನ್ ಹೇಳೋದು ಹೀಗೆ..
ನಿತಿನ್ ದೇಸಾಯಿ,ಅಮೀರ್ ಖಾನ್ | Photo: PTI
ಬಾಲಿವುಡ್ ಕಲಾ ನಿರ್ದೇಶಕ ನಿತಿನ್ ದೇಸಾಯಿ ಅಂತ್ಯಕ್ರಿಯೆಯಲ್ಲಿ ಕೆಲವೇ ಮಂದಿ ಗಣ್ಯರು ಹಾಜರಿದ್ದರು. ಪಾಲ್ಗೊಂಡವರ ಪೈಕಿ ಆಮಿರ್ ಖಾನ್ ಕೂಡಾ ಒಬ್ಬರು. ಇಷ್ಟು ಕಡಿಮೆ ಜನ ಇದ್ದಿದ್ದೇಕೆ ಎಂಬ ಪ್ರಶ್ನೆ ಸಹಜವಾಗಿಯೇ ಮಾಧ್ಯಮದವರನ್ನು ಕಾಡಿತು. ಈ ಬಗ್ಗೆ ಆಮಿರ್ ಖಾನ್ ಅವರನ್ನು ಕೇಳಿದಾಗ, "ಬಹುಶಃ ಅವರದ್ದೇ ಆದ ಕಾರಣ ಇರಬೇಕು" ಎಂದು ಹೇಳಿದ್ದಾರೆ.
ನಿತಿನ್ ದೇಸಾಯಿ (57) ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. ಆಮಿರ್ ಖಾನ್ ಅವರ 'ಲಗಾನ್' ಚಿತ್ರತಂಡದಲ್ಲಿದ್ದ ನಿತಿನ್ ಬಗ್ಗೆ ಅವರ ಅಭಿಪ್ರಾಯ ಕೇಳಲು ಮಾಧ್ಯಮದವರ ದೊಡ್ಡ ಗುಂಪು ಅಮೀರ್ ಖಾನ್ ಅವರನ್ನು ಮುತ್ತಿಕೊಂಡಿತು. "ಇದು ತೀರಾ ಆಘಾತಕಾರಿ. ಇದು ಹೇಗೆ ಸಂಭವಿಸಿತು ಎನ್ನುವುದೇ ಅರ್ಥವಾಗುತ್ತಿಲ್ಲ. ನಂಬಲು ಕೂಡಾ ಸಾಧ್ಯವಾಗುತ್ತಿಲ್ಲ. ಅವರು ಹೀಗೆ ಮಾಡಬಾರದಿತ್ತು. ಬದಲಾಗಿ ನೆರವಿಗಾಗಿ ಕೇಳಿಕೊಳ್ಳಬೇಕಿತ್ತು. ಇಂಥ ದುರಂತ ಸಂದರ್ಭದಲ್ಲಿ ಏನು ಹೇಳಲು ಸಾಧ್ಯ? ಏನಾಯಿತು ಎಂದು ಅರ್ಥಮಾಡಿಕೊಳ್ಳುವುದು ಕಷ್ಟ. ತೀರಾ ಬೇಸರದ ವಿಚಾರ. ಅತ್ಯಂತ ಮೇಧಾವಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ" ಎಂದು ಖಾನ್ ದುಃಖಿಸಿದರು.
ಲಗಾನ್ ನಿರ್ದೇಶಕ ಅಶುತೋಷ್ ಗೋವರೀಕರ್ ಮತ್ತು ಸಂಜಯ್ ಲೀಲಾ ಬ್ಸಾಲಿ ಕೂಡಾ ಭಾಗವಹಿಸಿದ್ದರು. ಹಲವು ಮಂದಿಯ ಜತೆ ನಿತಿನ್ ಕೆಲಸ ಮಾಡುತ್ತಿದ್ದರು. ಆದರೆ ಹಲವು ಕಾರಣಕ್ಕಾಗಿ ಜನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರದು. ಅವರಿಗೆ ಪ್ರತಿಯೊಬ್ಬರ ಹೃದಯದಲ್ಲೂ ವಿಶೇಷ ಸ್ಥಾನವಿದೆ. ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತಿದ್ದೇನೆ" ಎಂದು ಅಮೀರ್ ಪ್ರತಿಕ್ರಿಯಿಸಿದರು.