ಅಬ್ದುಲ್ ಖಾದರ್ ಹಾಜಿ
Update: 2025-08-26 19:59 IST
ಬಂಟ್ವಾಳ : ನಂದಾವರ ನಿವಾಸಿ ಅಬ್ದುಲ್ ಖಾದರ್ ಹಾಜಿ (ಕಿಡಾವಾಕ) (82) ವಯೋಸಹಜ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪಾಣೆಮಂಗಳೂರು ಸಮೀಪದ ನಂದಾವರ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಮೃತರ ಮನೆಗೆ ಭೇಟಿ ನೀಡಿದ ಧಾರ್ಮಿಕ ವಿದ್ವಾಂಸರುಗಳಾದ ತ್ವಾಖಾ ಅಹ್ಮದ್ ಮುಸ್ಲಿಯಾರ್, ಕುಂಬೋಳ್ ತಂಙಳ್, ಬಂಬ್ರಾಣ ಉಸ್ತಾದ್, ಉಸ್ಮಾನ್ ಫೈಝಿ ತೋಡಾರ್ ಪ್ರಾರ್ಥನೆ ಸಲ್ಲಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಹಲವಾರು ರಾಜಕೀಯ ಮುಖಂಡರು ಮನೆಗೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.
ಮೃತರು ನಂದಾವರ ಮಸೀದಿ ಮಾಜಿ ಅಧ್ಯಕ್ಷ ಶರೀಫ್ ನಂದಾವರ, ಅಬ್ದುಲ್ ಮಜೀದ್ ಫೈಝಿ ಮಲೇಷಿಯಾ ಸಹಿತ ಮೂವರು ಪುತ್ರರು, ಇಬ್ಬರು ಪುತ್ರಿಯರು, ಪತ್ನಿ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.