ಅಡೂರು ಹರಿಕೃಷ್ಣ ರಾವ್
Update: 2025-09-07 20:29 IST
ಉಡುಪಿ, ಸೆ.7: ಉಡುಪಿ ಎಸ್‌ಎಂಪಿ ಸಂಸ್ಕೃತ ಕಾಲೇಜಿನಲ್ಲಿ ಹಿರಿಯ ಗ್ರಂಥಪಾಲಕರಾಗಿ ನಿವೃತ್ತರಾಗಿದ್ದ ಅಡೂರು ಹರಿಕೃಷ್ಣ ರಾವ್(65) ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು.
ಆಧ್ಯಾತ್ಮಿಕ ಚಿಂತಕರಾಗಿ, ಲೇಖಕರಾಗಿ, ಅಂಕಣಕಾರರಾಗಿದ್ದ ಇವರು ’ಉತ್ತಿಷ್ಠ ಪರಂತಪ,’ ’ಕತೆಗಳೊಂದಿಗೆ ಕಲಿಕೆ’ ಮಂತಾದ ಹಲವು ಕೃತಿಗಳನ್ನು ರಚಿಸಿದ್ದಾರೆ. ಇವರು ಉಡುಪಿಯ ವೈಕುಂಠ ಬಾಳಿಗಾ ಕಾಲೇಜಿನ ನಿರ್ದೇಶಕಿ ಡಾ.ನಿರ್ಮಲ ಕುಮಾರಿ, ಓರ್ವ ಪುತ್ರನನ್ನು ಅಗಲಿದ್ದಾರೆ.