ರಾಜೇಶ್ ಹೆಗ್ಡೆ
Update: 2025-09-27 22:03 IST
ಮಂಗಳೂರು,ಸೆ.27:ನಗರದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಎಎಸ್ಸೈ ರಾಜೇಶ್ ಹೆಗ್ಢೆ (54) ಶನಿವಾರ ತನ್ನ ಮನೆಯಲ್ಲೇ ಹೃದಯಾಘಾತದಿಂದ ನಿಧನರಾದರು.
ಮೃತರು ಪತ್ನಿ, ಪುತ್ರ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ಕಾಸರಗೋಡಿನ ಪಳ್ಳಿಕೆರೆ-ಚಿತ್ತಾರಿ ನಿವಾಸಿಯಾಗಿದ್ದ ರಾಜೇಶ್ ಹೆಗ್ಡೆ 1993ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆ ಗೊಂಡು ವಿಟ್ಲ ಠಾಣೆಯಲ್ಲಿ ಕಾರ್ಯ ಆರಂಭಿಸಿದ್ದರು. ನಗರದ ಬಂದರು, ಗುಪ್ತಚರ ವಿಭಾಗ ಸಹಿತ ವಿವಿಧ ಠಾಣೆ ಗಳಲ್ಲಿ ಸುಮಾರು 32 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು ನಗರದ ಉರ್ವಸ್ಟೋರ್ ಬಳಿ ವಾಸವಾಗಿದ್ದರು.