ಸುಚೇತ ದಯಾನಾಥ ಕೋಟ್ಯಾನ್
Update: 2025-09-30 19:36 IST
ಮಂಗಳೂರು: ಮಂಗಳೂರಿನ ನ್ಯಾಯಾಂಗ ಇಲಾಖೆಯಲ್ಲಿ ಶಿರಸ್ತೇದಾರರಾಗಿ ನಿವೃತ್ತರಾದ ಸುಚೇತ ದಯಾನಾಥ ಕೋಟ್ಯಾನ್ (76) ಅನಾರೋಗ್ಯದಿಂದ ಮಂಗಳವಾರ ಬೆಳಗಿನ ಜಾವ ಸ್ವಗೃಹದಲ್ಲಿ ನಿಧನರಾದರು.
ಅವರು ನ್ಯಾಯವಾದಿಪತಿ ದಯಾನಾಥ ಕೋಟ್ಯಾನ್, ಪುತ್ರರಾದ ಡಾ. ಸಂತೋಷ ಕೋಟ್ಯಾನ್, ರೋಟರಿ ಮಂಗಳೂರು ಸೆಂಟ್ರಲ್ ಕಾರ್ಯದರ್ಶಿ ವಿಕಾಸ್ ಕೋಟ್ಯಾನ್ ಹಾಗೂ ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ. ಇವರ ಅಂತ್ಯಕ್ರಿಯೆಯು ಬುಧವಾರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಕುಟುಂಬದ ಮೂಲ ತಿಳಿಸಿದೆ.