ಲಾರೆನ್ಸ್ ಎಫ್. ಮೊಂತೆರೊ
Update: 2025-10-28 20:03 IST
ಮಂಗಳೂರು,ಅ.28: ಮಧ್ಯ ಪ್ರದೇಶದ ಭೋಪಾಲದ ಖಾಂಡ್ವಾ ಕ್ಯಾಥೊಲಿಕ್ ಧರ್ಮ ಪ್ರಾಂತ್ಯದ ಹಿರಿಯ ಧರ್ಮಗುರು ಆಗಿದ್ದ ಮಂಗಳೂರು ಮೂಲದ ಫಾ. ಲಾರೆನ್ಸ್ ಎಫ್. ಮೊಂತೇರೊ (95) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅ.27ರಂದು ಆಸ್ಪತ್ರೆಯಲ್ಲಿ ನಿಧನರಾದರು.
ಫಾ. ಲಾರೆನ್ಸ್ ಎಫ್. ಮೊಂತೇರೊ ಅವರು ಮಂಗಳೂರಿನ ಬಜ್ಪೆ ಸಮೀಪದ ಅದ್ಯಪಾಡಿ ಚರ್ಚ್ ವ್ಯಾಪ್ತಿಯ ಕರಂಬಾರ್ ನಿವಾಸಿ ದಿ. ಪಿಯಾದ್ ಮತ್ತು ಫ್ಲೋರಿನ್ ಮೊಂತೇರೊ ಪುತ್ರ.
ಖಾಂಡ್ವಾ ಧರ್ಮ ಪ್ರಾಂತ್ಯದಲ್ಲಿ ಧರ್ಮಗುರುಗಳಾಗಿ ನಿಮಾರ್, ಬುರ್ಹಾನ್‌ಪುರ್, ಮುಂಡಿ, ಸೈಂಟ್ ಪಿಯುಸ್ ಸೆಮಿನರಿ ಮುಂತಾದ ಕಡೆ ಒಟ್ಟು ಸುಮಾರು 50 ವಷರ್ಗಳ ಕಾಲ ಅವರು ಸೇವೆ ಸಲ್ಲಿಸಿದ್ದರು.
ಬದ್ಧತೆಯ ಸೇವೆಗೆ ಹೆಸರಾಗಿದ್ದು, ಜನರ ಪ್ರೀತಿಗೆ ಪಾತ್ರರಾಗಿದ್ದರು. 2005ರಲ್ಲಿ ನಿವೃತ್ತಿ ಹೊಂದಿದ ಬಳಿಕ ಊರಿಗೆ ಮರಳಿದ ಅವರು ಬಜ್ಪೆಯ ಸೌಹಾರ್ದ ನಗರದಲ್ಲಿ ನೆಲೆಸಿದ್ದರು.