ಮುರಲೀಧರ ಭಟ್
Update: 2026-01-01 20:03 IST
ಶಿರ್ವ, ಜ.1: ಮೂಲತಃ ಮುದರಂಗಡಿ ಸಮೀಪದ ಸಾಂತೂರಿನವರಾದ ಇನ್ನಂಜೆ ಎಸ್.ವಿ.ಎಚ್.ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ವಿಭಾಗದಲ್ಲಿ ಸಂಸ್ಕೃತ ಪಂಡಿತರಾಗಿದ್ದ ಮುರಲೀಧರ ಭಟ್(85) ಗುರುವಾರ ವಯೋಸಹಜ ಕಾರಣದಿಂದ ಇನ್ನಂಜೆಯ ಸ್ವಗೃಹದಲ್ಲಿ ನಿಧನರಾದರು.
ಇವರು ಉಂಡಾರು ಶ್ರಿ ವೀಷ್ಣುಮೂರ್ತಿ ದೇವಳದಲ್ಲಿ ವೈದಿಕರಾಗಿಯೂ ಸೇವೆ ಸಲ್ಲಿಸಿದ್ದು, ಜನಾನುರಾಗಿಯಾಗಿದ್ದರು. ಇವರು ಪತ್ನಿ ಅಹಲ್ಯಾ ಸೇರಿದಂತೆ ಇಬ್ಬರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.