ಅಡ್ಡೂರು ಅಬ್ದುಲ್ ರಹಿಮಾನ್ ಮುಸ್ಲಿಯಾರ್ ನಿಧನ
Update: 2025-08-10 14:41 IST
ಬಂಟ್ವಾಳ : ಮೂಲತಃ ಪಾಣೆಮಂಗಳೂರು ಸಮೀಪದ ಉಪ್ಪುಗುಡ್ಡೆ ನಿವಾಸಿ, ಪ್ರಸ್ತುತ ಅಡ್ಡೂರು-ಕೆಳಗಿನಕೆರೆ ಎಂಬಲ್ಲಿ ವಾಸವಾಗಿರುವ ಅಬ್ದುಲ್ ರಹಿಮಾನ್ ಮುಸ್ಲಿಯಾರ್ (70) ಅವರು ಅಲ್ಪಕಾಲದ ಅಡ್ಡೂರಿನ ಸ್ವಗೃಹದಲ್ಲಿ ಭಾನುವಾರ ಮುಂಜಾನೆ ನಿಧನರಾದರು.
ಕುಂದಾಪುರ ಕೋಟ-ಕೋಡಿ ಕನ್ಯಾನ ಮಸೀದಿಯಲ್ಲಿ ಸುಮಾರು 35 ವರ್ಷಗಳಿಗೂ ಅಧಿಕ ಕಾಲ ಹಾಗೂ ಕುಂದಾಪುರ-ಹಂಗ್ಲೂರು ಮಸೀದಿಯಲ್ಲಿ 10 ವರ್ಷಗಳ ಕಾಲ ಧಾರ್ಮಿಕ ಸೇವೆಗೈದಿದ್ದ ಅವರು ಕಳೆದ ಕೆಲ ವರ್ಷಗಳಿಂದ ನಿವೃತ್ತ ಜೀವನ ನಡೆಸುತ್ತಿದ್ದರು. ಇವರು ಕರಾವಳಿ ಟೈಮ್ಸ್ ಸಹ ಸಂಪಾದಕ ಯು ಮುಸ್ತಫಾ ಅವರ ಸಹೋದರರಾಗಿದ್ದಾರೆ.
ಮೃತರು ನಾಲ್ವರು ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.