ಕಾಸರಗೋಡು: ಉದ್ಯಮಿ ಎ.ಕೆ ಮುಹಮ್ಮದ್ ನಿಧನ
Update: 2025-07-10 14:16 IST
ಕಾಸರಗೋಡು: ನಗರದ ಎ.ಕೆ ಬ್ರದರ್ಸ್ ಪಾಲುದಾರ ಅಡ್ಕತ್ತಬೈಲ್ ನ ಎ.ಕೆ ಮುಹಮ್ಮದ್ ಅನ್ವರ್ (65) ಗುರುವಾರ ಮುಂಜಾನೆ ಹೃದಯಾಘಾತ ದಿಂದ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಕಾಸರಗೋಡು ಹಳೆಯ ಬಸ್ಸು ನಿಲ್ದಾಣ, ಏರ್ ಲೈನ್ಸ್ ಜಂಕ್ಷನ್, ತಾಯಲಂಗಾಡಿ ಮೊದಲಾದ ಕಡೆಗಳಲ್ಲಿ ಎ.ಕೆ ಬ್ರದರ್ಸ್ ಸಂಸ್ಥೆಯ ಪಾಲುದಾರರಾಗಿದ್ದರು.
ಮೃತರು ಪತ್ನಿ , ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಆಗಲಿದ್ದಾರೆ