×
Ad

ಕುಕ್ಕಾಡಿ ಅಬೂಬಕ್ಕರ್ ನಿಧನ

Update: 2025-09-30 14:58 IST

ಮಂಗಳೂರು, ಸೆ.30: ಬೈಕಂಪಾಡಿ ಕುಕ್ಕಾಡಿ ಹೌಸ್‌ನ ಅಬೂಬಕರ್ ಕುಕ್ಕಾಡಿ (89) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಮುಂಜಾವ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ, ಮೂವರು ಪುತ್ರಿಯರು, ಓರ್ವ ಪುತ್ರ ಸಹಿತ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

ಬೈಕಂಪಾಡಿ ಗ್ರಾಪಂನ ಮಾಜಿ ಅಧ್ಯಕ್ಷರಾಗಿದ್ದ ಅಬೂಬಕರ್ ಕುಕ್ಕಾಡಿಯವರು ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಮಾಜಿ ಅಧ್ಯಕ್ಷರು, ಬೈಕಂಪಾಡಿಯ ಬರ್ಟ್ರಂರ್ಡ್ ರಸೆಲ್ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನ ಸ್ಥಾಪಕರಾಗಿದ್ದಾರೆ.

ಮಂಗಳವಾರ ರಾತ್ರಿ ಕೃಷ್ಣಾಪುರ 7ನೇ ಬ್ಲಾಕ್‌ನ ಈದ್ಗಾ ಕಬರ್‌ಸ್ಥಾನದಲ್ಲಿ ಮೃತರ ದಫನ ಕಾರ್ಯ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News