ಪವಿತ್ರ
Update: 2025-11-10 22:27 IST
ಸುಳ್ಯ : ಹರಿಹರ ಪಲ್ಲತಡ್ಕ ಗ್ರಾಮ ಪಂಚಾಯಿತಿಯ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಮಕರ್ಂಜ ಗ್ರಾಮದ ಮಂಜೋಳ್ ಕಜೆ ದಿ. ಚಿನ್ನಪ್ಪ ಗೌಡ ಎಂಬವರ ಪುತ್ರಿ ಪವಿತ್ರ (24) ಮಂಗಳೂರಿನ ಆಸ್ಪತ್ರೆಯಲ್ಲಿ ಸೋಮವಾರ ನಿಧನರಾದರು.
ಕಳೆದ ಆರು ತಿಂಗಳಿನಿಂದ ಅಸೌಖ್ಯದಿಂದ ಬಳಲುತ್ತಿದ್ದ ಅವರು 6 ದಿನದ ಹಿಂದೆ ಅಸೌಖ್ಯದಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಧನರಾದರು. ಮೃತರಿಗೆ ತಾಯಿ ಮತ್ತು ಸಹೋದರಿ ಇದ್ದಾರೆ.