×
Ad

ನಿವೃತ್ತ ಧರ್ಮಗುರು ಡೆನಿಸ್ ಡಿ ಸೋಜ

Update: 2025-11-16 17:02 IST

ಮಂಗಳೂರು, ನ.16: ಮಂಗಳೂರಿನ ಹಿರಿಯ ಕ್ರೈಸ್ತ ಧರ್ಮಗುರು ಜೆಪ್ಪುವಿನ ಸೈಂಟ್ ಜುಝ್ ವಾಜ್ ಹೋಂನ ನಿವಾಸಿ ವಂ. ಡೆನಿಸ್ ಡಿ ಸೋಜ (91) ಅವರು ನಿಧನರಾದರು

ಮಂಗಳೂರು ಧರ್ಮಪ್ರಾಂತ್ಯದಲ್ಲಿ ಡೆನಿಸ್ ಆರು ದಶಕಗಳಿಗೂ ಹೆಚ್ಚು ಕಾಲ ಧರ್ಮಗುರುವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಫೆ.15ರ, 1935 ರಂದು ಮೊಡಂಕಾಪುವಿನ ತೊಡಂಬಿಲಾದಲ್ಲಿ ಪಾಲ್ ಡಿ ಸೋಜ ಮತ್ತು ಮೇರಿ ಮ್ಯಾಗ್ಡಲೆನ್ ನೊರೊನ್ಹಾ ದಂಪತಿಯ ಪುತ್ರನಾಗಿ ಜನಿಸಿದ ಡೆನಿಸ್ ಅವರು ಡಿ.4ರ, 1961 ರಂದು ಧರ್ಮಗುರುಗಳಾಗಿ ದೀಕ್ಷೆ ಪಡೆದರು.

ಶಿರ್ವದಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಆರಂಭಿಸಿದ ಪಾಂ ದೂರ್, ಬೊಂದೆಲ್, ನಿಡ್ಡೋಡಿ, ಮುಕಮಾರ್, ಕ್ಯಾಸಿಯಾ, ಸುರತ್ಕಲ್ ಮತ್ತು ಸಂಪಿಗೆಯ ಚರ್ಚ್‌ನಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದ್ದರು. 2010 ರಲ್ಲಿ ನಿವೃತ್ತರಾಗಿದ್ದರು. ಬಳಿಕ ಜೆಪ್ಪುವಿನ ಸೈಂಟ್ ಜುಝೆ ವಾಜ್ ಹೋಂನಲ್ಲಿ ನೆಲೆಸಿದ್ದರು.

ಡೆನಿಸ್ ಅವರ ಮೃತದೇಹದ ಅಂತ್ಯಕ್ರಿಯೆಯ ಬಲಿದಾನ ಮತ್ತು ಅಂತ್ಯಕ್ರಿಯೆ ವಿಧಿವಿಧಾನಗಳು ಸೋಮವಾರ (ನ.17) ಬೆಳಗ್ಗೆ 10.00 ಗಂಟೆಗೆ ವೆಲೆನ್ಸಿಯಾದ ಸೈಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News