ಶ್ರೀನಿವಾಸ್
Update: 2025-11-03 19:08 IST
ಸುಳ್ಯ : ಸುಳ್ಯದ ವಿಷ್ಣು ಸರ್ಕಲ್ ನಿವಾಸಿ ಪ್ರವೀಣ್ ಇಂಡಸ್ಟ್ರಿಸ್ ಮಾಲಕ ಶ್ರೀನಿವಾಸ್ ರವರ ಪುತ್ರ ದೀಪಕ್ (46) ಅವರು ಭಾನುವಾರ ಸಂಜೆ ಮಡಿಕೇರಿಯಲ್ಲಿ ಹೃದಯಾಘಾತದಿಂದ ನಿಧನರಾದರು.
ಸಂಜೆ ತನ್ನ ಕಾರಿನಲ್ಲಿ ಗೆಳೆಯನೊಂದಿಗೆ ಮಡಿಕೇರಿಗೆ ಹೋಗಿದ್ದ ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ದೀಪಕ್ ಸುಳ್ಯ ಶಾರದಾಂಬಾ ಸೇವಾ ಸಮಿತಿ, ವಿಷ್ಣು ಸರ್ಕಲ್ ವೀರಕೇಸರಿ ಬಳಗದ ಪದಾಧಿಕಾರಿಯಾಗಿ ಉತ್ತಮ ಸಂಘಟಕರಾಗಿದ್ದರು. ಕಳೆದ ಕೆಲ ವರ್ಷಗಳ ಹಿಂದೆ ಅಂಬಟೆಡ್ಕದಲ್ಲಿ ವಸ್ತ್ರ ಮಳಿಗೆ ಆರಂಭಿಸಿದ್ದರು. ಅವಿವಾಹಿತರಾಗಿದ್ದ ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರರು ಇದ್ದಾರೆ.