ನಾಟಿ ವೈದ್ಯ ಅಣ್ಣು ಅಜಿಲ
Update: 2025-11-21 20:14 IST
ವಿಟ್ಲ: ಪುಣಚ ಗ್ರಾಮದ ಹಿರಿಯ ದೈವ ನರ್ತಕ, ನಾಟಿ ವೈದ್ಯ ನಡುಸಾರು ಅಣ್ಣು ಅಜಿಲ (75) ಅವರು ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ.
ಇವರು ತುಳುನಾಡಿನ ದೈವಗಳಲ್ಲಿ ವಿಶೇಷವೆನಿಸಿದ ಜಠಾಧಾರಿ ದೈವ ನರ್ತಕರಾಗಿದ್ದರು. ಪುಣಚ ಗ್ರಾಮದ ದಲ್ಕಜೆಗುತ್ತು ಎಂಬಲ್ಲಿ ಕಳೆದ 38 ವರ್ಷಗಳಿಂದ ದೈವ ನರ್ತಕರಾಗಿ ಸೇವೆ ಸಲ್ಲಿಸಿದ್ದರು. ಅದಲ್ಲದೇ ಪಾರಂಪರಿಕವಾಗಿ ಬಂದ ನಾಟಿ ವೈದ್ಯ ಪದ್ಧತಿಯ ಮೂಲಕ ಚಿರಪರಿಚಿತರಾಗಿದ್ದರು. ಪುಣಚ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕರಾಗಿದ್ದರು.
ಇವರಿಗೆ ಪತ್ನಿ, ಇಬ್ಬರು ಪುತ್ರರು, ಪುತ್ರಿ ಇದ್ದಾರೆ.