ಯಾಕೂಬ್ ಅಬ್ಬೆಟ್ಟು
Update: 2025-10-13 17:53 IST
ಬಂಟ್ವಾಳ : ತಾಲೂಕಿನ ಅಬ್ಬೆಟ್ಟು ನಿವಾಸಿ ಹಾಜಿ ಎ.ಎಚ್. ಯಾಕೂಬ್ ಅಬ್ಬೆಟ್ಟು (72) ರವಿವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಕೃಷಿ, ವ್ಯಾಪಾರಿ ಕುಟುಂಬದ ಯಾಕೂಬ್ ಹಲವು ವರ್ಷಗಳ ಕಾಲ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗಿಯಾಗಿದ್ದರು. ಸರಳ, ಸಜ್ಜನ ವ್ಯಕ್ತಿತ್ವದ ಯಾಕೂಬ್ ಅವರು ಸಮಾಜ ಸೇವೆಯಲ್ಲೂ ನಿರತರಾಗಿದ್ದರು.