×
Ad

ಹಿರಿಯ ಯಕ್ಷಗಾನ ಕಲಾವಿದ, ರಂಗಮನೆಯ ಸುಜನಾ ಸುಳ್ಯ ನಿಧನ

Update: 2025-10-24 14:37 IST

ಸುಳ್ಯ:ಹಿರಿಯ ಯಕ್ಷಗಾನ ಕಲಾವಿದರಾದ ರಂಗಮನೆಯ ಸುಜನಾ ಸುಳ್ಯ (ಸುಳ್ಯ ಜಯರಾಮ ನಾವೂರು) ನಿಧನರಾಗಿದ್ದಾರೆ.

ವಯೋಸಹಜ ಅಸೌಖ್ಯದಿಂದ ಸುಳ್ಯದ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಖ್ಯಾತ ರಂಗಕರ್ಮಿ ಜೀವನ್ ರಾಮ್‌ ಸುಳ್ಯ ಇವರ ಪುತ್ರ. ಸುಜನಾ ಅವರು ಯಕ್ಷಗಾನ ಕಲಾವಿದ ಪ್ಯಾರ್ ನಾವೂರು ಅವರ ಸಹೋದರ. ಯಕ್ಷಗಾನದಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡುತ್ತಿದ್ದ ಅವರು ಹಾಸ್ಯ ಕಲಾವಿದರಾಗಿ ಹಲವು ಪಾತ್ರಗಳಿಗೆ ಜೀವ ತುಂಬಿದ್ದರು.  ವಿವಿಧ ಯಕ್ಷಗಾನ ಮೇಳಗಳಲ್ಲಿ ಕಲಾವಿದರಾಗಿ ಹಲವಾರು ವರ್ಷಗಳ ಕಾಲ ತಿರುಗಾಟ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News